Advertisement
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ರಸ್ತೆಯಮೂಲಕ ಶಿಡ್ಲಘಟ್ಟ ಸರ್ಕಲ್‌ವರೆಗೆಪ್ರತಿಭಟನೆ ನಡೆಸಿ, ಬಳಿಕ ಮಾನವ ಸರಪಳಿ ನಿರ್ಮಿಸಿ ಆರನೇ ವೇತನಆಯೋಗ ಅನು ಷ್ಠಾನ ಮಾಡಬೇಕು. ನ್ಯಾಯ ಯುತ ಬೇಡಿಕೆನಮ್ಮದಾಗಿದೆ. ಸರ್ಕಾರ ಬೇಡಿಕೆಯನ್ನು ಈಡೇರಿಸಬೇಕು ಎಂದುಒತ್ತಾಯಿಸಿ, ಉಪ ವಿಭಾಗಾಧಿಕಾರಿ ರಘುನಂದನ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
Related Articles
Advertisement
ಚಿಂತಾಮಣಿ: ಸಾರಿಗೆ ನೌಕರರಿಗೆ 6ನೇ ವೇತನ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಈಡೇರಿಕೆಗಾಗಿ ಆಗ್ರಹಿಸಿ, ಕೆಎಸ್‌ಆರ್‌ಟಿಸಿ ನೌಕರರುತಮ್ಮ ಕುಟುಂಬದೊಂದಿಗೆ ತಟ್ಟೆ ಲೋಟ ಚಳವಳಿನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದುಘೋಷಣೆ ಮಾಡಬೇಕು. ಸರ್ಕಾರಿ ನೌಕರರಿಗೆ ಸಿಗುವಎಲ್ಲಾ ಸೌಲಭ್ಯಗಳನ್ನು ಸಾರಿಗೆ ನೌಕರರಿಗೆ ನೀಡಬೇಕು. ಕೋವಿಡ್ ದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ರೂ., ಪರಿಹಾರ ನೀಡಬೇಕು ಸೇರಿದಂತೆ ತಮ್ಮಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ,ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಹನುಮಂತ ರಾಯಪ್ಪ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಸಾರಿಗೆ ನೌಕರರು ತಮ್ಮ ಕುಟುಂಬದೊಂದಿಗೆ ಹಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಗರದ ಪ್ರಮುಖರಸ್ತೆಗಳಲ್ಲಿ ತಟ್ಟೆ ಲೋಟ ಚಳವಳಿಗೆ ಮುಂದಾದರು.ಚಿಂತಾಮಣಿ ನಗರ ಠಾಣೆ ಪೊಲೀಸರು ಪ್ರವಾಸಿ ಮಂದಿರದ ಬಳಿ ತಡೆದು, ಮನವಿ ಸಲ್ಲಿಕೆಗೆ ಅವಕಾಶ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸೀಕಲ್ ರಮಣಾ ರೆಡ್ಡಿ, ಮಾನವ ಹಕ್ಕುಗಳ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಲ್ಲಹಳ್ಳಿ ವೆಂಕಟೇಶ್, ಛಲವಾದಿಮಹಾಸಭಾದ ಜಿಲ್ಲಾಧ್ಯಕ್ಷ ಗಣೇಶ್, ಅಖೀಲ ಕರ್ನಾಟಕರಸ್ತೆ ಸುರಕ್ಷತಾ ಸಂಘದ ರಾಜ್ಯಾಧ್ಯಕ್ಷ ಮುನೇಶ್,ಉಪಾಧ್ಯಕ್ಷ ಮುತ್ತಪ್ಪ, ತ್ಯಾಗರಾಜ್, ಆಬ್ಲೂಡುವೆಂಕಟೇಶ್, ಎಸ್.ರಾಜು ಮತ್ತು ಸಾರಿಗೆ ಇಲಾಖೆ ನೌಕರರು ಸೇರಿದಂತೆ ಅನೇಕರು ಹಾಜರಿದ್ದರು.