Advertisement

ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ

02:47 PM Feb 21, 2017 | |

ಕಲಬುರಗಿ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಗರದಲ್ಲಿ ರಾಜ್ಯವ್ಯಾಪಿ ಕರೆ ಮೇರೆಗೆ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 

Advertisement

ಕಾಂಗ್ರೆಸ್‌ ಪಕ್ಷದ ವರಿಷ್ಠರಿಗೆ ಮುಖ್ಯಮಂತ್ರಿಗಳ ಪರವಾಗಿ 1000 ಕೋಟಿ ರೂ. ನೀಡಿರುವ ಕುರಿತು ವಿಧಾನ ಪರಿಷತ್‌ ಸದಸ್ಯ ಕೆ. ಗೋವಿಂದರಾಜು ಅವರ ಡೈರಿಯಲ್ಲಿ ಉಲ್ಲೇಖವಾಗಿದೆ. ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವ ಡೈರಿಯಲ್ಲಿ ಪಕ್ಷದ ವರಿಷ್ಠರಿಗೆ ಹಣ ಸಂದಾಯ ಮಾಡಿದ್ದು, ದಾಖಲೆ ಇದೆ. ಅದನ್ನು ಸ್ವತಃ ಗೋವಿಂದರಾಜು ಅವರು ಐಟಿ ಇಲಾಖೆಗೆ ಡೈರಿಯಲ್ಲಿನ ಅಂಶಗಳು ಬಿಜೆಪಿಯವರಿಗೆ ಹೇಗೆ ಗೊತ್ತಾಗಿವೆ ಎಂದು ಪತ್ರ ಬರೆಯುವ ಮುಖಾಂತರ ಒಪ್ಪಿಕೊಂಡಿದ್ದಾರೆ. 

ಈ ಕುರಿತು ಸಮಗ್ರ ಮಾಹಿತಿ ಬಹಿರಂಗಪಡಿಸಲು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಕ್ಕಿನ ಮೇಲ್ಸೇತುವೆ ಯೋಜನೆಗೆ ಮುಖ್ಯಮಂತ್ರಿಗಳ ಆಪ್ತರಿಗೆ, ಕುಟುಂಬದವರಿಗೆ 65 ಕೋಟಿ ರೂ. ಲಂಚ ನೀಡಲಾಗಿದೆ. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ಒಂದು ದಾಖಲೆ ತೋರಿಸಲಿ ಎಂದು ಮೊಂಡುವಾದ ಪ್ರತಿಪಾದಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಮಾಧ್ಯಮದಲ್ಲಿ ವರದಿಯಾದಂತೆ ಸಚಿವ ರಮೇಶ ಜಾರಕಿಹೊಳಿ ಮತ್ತು ಪ್ರದೇಶ ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷಿ ಹೆಬ್ಟಾಳಕರ್‌ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದು 162 ಕೋಟಿ ರೂ.ಗಳ ಅಕ್ರಮ ಸಂಪತ್ತು, ದಾಖಲೆಗಳಿಲ್ಲದ 41 ಲಕ್ಷ ರೂ. ನಗದು, 12 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದರೂ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನು ನೋಡಿದರೆ ಮುಖ್ಯಮಂತ್ರಿಗಳು ಭ್ರಷ್ಟರ ಜತೆ ಕೈಗೂಡಿಸಿರುವುದು ಸಾಬೀತುಪಡಿಸುತ್ತದೆ. ಒಟ್ಟಾರೆ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪಕ್ಷದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಪಕ್ಷದ ನಗರ ಜಿಲ್ಲಾಧ್ಯಕ್ಷ ಮತ್ತು ವಿಧಾನ ಪರಿಷತ್‌  ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸಚಿವರಾದ ಬಾಬುರಾವ ಚವ್ಹಾಣ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ವಿಧಾನ ಪರಿಷತ್‌ ಸದಸ್ಯರಾದ ಕೆ.ಬಿ. ಶಾಣಪ್ಪ, ಅಮರನಾಥ ಪಾಟೀಲ,

Advertisement

ಮಾಜಿ ಶಾಸಕ ಎಂ.ವೈ. ಪಾಟೀಲ, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮುಖಂಡರಾದ ದಯಾಘನ್‌ ಧಾರವಾಡಕರ, ರವಿ ಬಿರಾದಾರ, ಪ್ರಕಾಶ ಜಮಾದಾರ, ಶರಣು ಸಲಗರ, ಸೂರ್ಯಕಾಂತ ನಾಕೇದಾರ, ವಿದ್ಯಾಸಾಗರ ಕುಲಕರ್ಣಿ, ಸಂಗಮೇಶ ರಾಜೋಳೆ, ಬಸವರಾಜ ಮತ್ತಿಮೂಡ, ಶಿವಶರಣಪ್ಪ ನಿಗ್ಗುಡಗಿ, ಮಲ್ಲಿಕಾರ್ಜುನ ಲಿಂಗದಳ್ಳಿ, ಶ್ಯಾಮರಾವ ಪ್ಯಾಟಿ, ನಾಮದೇವ ರಾಠೊಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next