ಕೋಲಾರ: ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಂದೆ ಸೌದೆಯಲ್ಲಿ ಒಲೆ ಹಚ್ಚಿ ಹೋಳಿಗೆ ಮಾಡಿ ತಹಶೀಲ್ದಾರ್ ನಾಗರಾಜ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರ ಹಸಿವಿನ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದಬ್ಟಾಳಿಕೆ ಮಾಡುತ್ತಿದೆ ಎಂದು ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಆರೋಪ ಮಾಡಿದರು.
ದೇಶಾದ್ಯಂತ ಕೊರೊನಾದ ಕರಾಳತೆಗೆ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗುವ ಜೊತೆಗೆ ಬಡ ಕೂಲಿ ಕಾರ್ಮಿಕರ ಜೀವನ ಕಸಿದಿತ್ತು. ಕೊರೊನಾ ಕಡಿಮೆ ಆದ ನಂತರ ಮತ್ತೆ ಆರ್ಥಿಕತೆ ಹಳಿಗೆ ಮರ ಳುತ್ತಿದೆ ಎಂಬುವಷ್ಟರಲ್ಲಿ ರಷ್ಯಾ ಉಕ್ರೇನ್ ನಡು ವಿನ ಯುದ್ಧ ಎಲ್ಲಾ ನಿರೀಕ್ಷೆಗಳನ್ನು ತಲೆ ಕೆಳಕಾಗಿ ಸಿದೆ. ಯುದ್ಧದ ನೆಪದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದ್ದು, ಜನ ಜೀವನ ಅಸ್ತವ್ಯಸ್ತ ವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಬ್ಬದ ಸಂಭ್ರಮಕ್ಕೆ ಕಡಿವಾಣ: ಜನ ಸಾಮಾನ್ಯರ ತಿಂಗಳ ಬಜೆಟ್ ಹದಗೆಟ್ಟಿದ್ದು, ಆದಾಯ ಹೆಚ್ಚದೆ ಜಾಸ್ತಿಯಾಗಿರುವ ಖರ್ಚುಗಳನ್ನು ನಿಭಾಯಿಸಲು ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಂಬಂತೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಏರಿಕೆಯಿಂದ ಎರಡು ವರ್ಷಗಳಿಂದ ಕರಾಳ ಕೊರೊನಾದಿಂದ ಹಬ್ಬಗಳ ಆಚರಣೆಯಿಲ್ಲದೆ, ಈ ವರ್ಷ ಯುಗಾದಿ ಸಂಭ್ರಮದಲ್ಲಿದ್ದ ಜನ ಸಾಮಾನ್ಯರಿಗೆ ಬೆಲೆ ಹೊಡೆತ ಹಬ್ಬದ ಸಂತೋಷಕ್ಕೆ ಕಡಿವಾಣ ಹಾಕಿದೆ ಎಂದು ದೂರಿದರು.
ಜನಜೀವನ ದುಸ್ತರ: ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಜಾಗತಿಕ ಮಾರುಕಟ್ಟೆ ಯಲ್ಲಿ ಕಚ್ಚಾ ತೈಲ ದರ ಏರಿಕೆ ಆದಂತೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ನಿರೀಕ್ಷೆಗೂ ಮೀರಿ ಏರಿಕೆ ಯಾಗುತ್ತಿದೆ. ಇದರಿಂದ ರೈತರು ಬೆಳೆದ ಉತ್ಪನ್ನ ಗಳ ಮೇಲೆ ಹೊಡೆತ ಬೀಳುವ ಜೊತೆಗೆ ಸರಕು ಸಾಗಾಣಿಕೆ ಮಾಡುವ ಲಾರಿ ಬಾಡಿಗೆ ಹೆಚ್ಚಳ ವಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಹೊಡೆತ ಬಿದ್ದು ಜೀವನ ನಿರ್ವಹಣೆಯೇ ಕಷ್ಟಕರ ವಾಗುತ್ತದೆ ಎಂದು ಹೇಳಿದರು.
ಅನಿಲ ಬೆಲೆ ದಿನೇದಿನೆ ಗಗನಕ್ಕೆ ಏರಿಕೆ: ಮನುಷ್ಯನ ಪ್ರತಿನಿತ್ಯ ಜೀವನಕ್ಕೆ ಅವಶ್ಯಕತೆಯಿರುವ ಎಣ್ಣೆ ಯಿಂದ ಹಿಡಿದು ಬೇಳೆ, ಅಕ್ಕಿ, ಅಡುಗೆ ಅನಿಲ ಬೆಲೆ ದಿನೇದಿನೆ ಗಗನಕ್ಕೆ ಏರಿಕೆಯಾಗುತ್ತಿದ್ದು, ದುಡಿಮೆಯ ಸಂಪೂರ್ಣ ಹಣ ವೆಚ್ಚ ಮಾಡಿದರೂ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಕಲಬೆರಕೆ ಹೆಚ್ಚಾಗಿ ಜನಸಾಮಾನ್ಯರ ಆರೋಗ್ಯ ಹದಗೆಡು ವಂತಹ ಪರಿಸ್ಥಿತಿ ಬರುತ್ತದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ನಾಗರಾಜ್, ನಿಮ್ಮ ಮನವಿಯನ್ನು ಡೀಸಿ ಮೂಲಕ ರಾಷ್ಟ್ರಪತಿಗೆ ಕಳುಹಿಸುವ ಭರವಸೆ ನೀಡಿದರು. ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾ ಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡ ಹಳ್ಳಿ ಮಂಜುನಾಥ್, ತಾ. ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾ.ಅಧ್ಯಕ್ಷ ಪೆಮ್ಮ ದೊಡ್ಡಿ ಯಲ್ಲಣ್ಣ, ಮಂಗಸಂದ್ರ ನಾರಾಯಣಗೌಡ, ಗೋವಿಂದಪ್ಪ, ವೆಂಕಟೇಶಪ್ಪ, ಅಶ್ವತ್ಥಪ್ಪ, ಚಂದ್ರಪ್ಪ, ರತ್ನಮ್ಮ, ರಾಮಕ್ಕ, ಪಾರಂಡಹಳ್ಳಿ ಮಂಜುನಾಥ್, ನಾಗಭೂಷನ್, ಸಂದೀಪ್, ಮರಗಲ್ ಮುನಿ ಯಪ್ಪ, ಕಿರಣ್, ಚಾಂದ್‌ಪಾಷ, ಮುನ್ನಾ ಇದ್ದರು.