ಮುಕ್ತ್ಸಾರ್: ಉದ್ರಿಕ್ತ ರೈತರ ಗುಂಪೊಂದು ಬಿಜೆಪಿ ಶಾಸಕನ ಮೇಲೆ ಮುತ್ತಿಗೆ ಹಾಕಿ ಬಟ್ಟೆ ಹಾರಿದು ಹಾಕಿದ ಘಟನೆ ಪಂಜಾಬ್ ರಾಜ್ಯದ ಮುಕ್ತ್ಸಾರ್ ಜಿಲ್ಲೆಯ ಮಾಲೌಟ್ ನಲ್ಲಿ ಶನಿವಾರ ನಡೆದಿದೆ.
ಅಬೋಹರ್ ಬಿಜೆಪಿ ಶಾಸಕ ಅರುಣ್ ನಾರಂಗ್ ಹಲ್ಲೆಗೊಳಗಾದವರು. ಮಲೌಟ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಶಾಸಕ ಹೋದಾಗ ರೈತರ ಗುಂಪು ಹಲ್ಲೆ ನಡೆಸಿದೆ.
ಪ್ರತಿಭಟನಾ ನಿರತ ರೈತರು, ಶಾಸಕ ಅರುಣ್ ನಾರಂಗ್ ಗಾಗಿ ಬಿಜೆಪಿ ಕಚೇರಿಯ ಮುಂದೆ ಕಾದು ಕುಳಿತಿದ್ದರು. ಅರುಣ್ ನಾರಂಗ್ ಬರುತ್ತಿದ್ದಂತೆ ರೈತರ ಗುಂಪು ಅವರತ್ತ ಕಪ್ಪು ಶಾಯಿ ಎರಚಿತು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮತ್ತು ಸ್ಥಳೀಯ ನಾಯಕರು ಶಾಸಕರನ್ನು ಹತ್ತಿರದ ಅಂಗಡಿಯೊಂದರ ಒಳಗೆ ಕರೆದೊಯ್ದರು.
ಇದನ್ನೂ ಓದಿ:ಕೇರಳದಲ್ಲಿ ಎಡಪಕ್ಷಗಳು, ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಟೀಕೆ
ಆದರೆ ಸ್ವಲ್ಪ ಸಮಯದ ಬಳಿಕ ಶಾಸಕರು ಅಂಗಡಿಯಿಂದ ಹೊರಬರುತ್ತಿದ್ದಂತೆ ಮತ್ತೆ ಮುಗಿಬಿದ್ದ ಗುಂಪು ಹಲ್ಲೆ ನಡೆಸಿ ಶಾಸಕರ ಬಟ್ಟೆಯನ್ನು ಹರಿದು ಹಾಕಿದೆ. ಪೊಲೀಸರು ಕೂಡಲೇ ಮಧ್ಯ ಪ್ರವೇಶಿಸಿ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು ಎಂದು ವರದಿಯಾಗಿದೆ.
250-300 ಅಪರಿಚಿತ ಪ್ರತಿಭಟನಾಕಾರರ ವಿರುದ್ಧ ಸೆಕ್ಷನ್ 307ರ ಅಡಿಯಲ್ಲಿ ( ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಅಚ್ಛೇ ದಿನ್ ಬರುತ್ತದೆ ಎಂದು ಕಾಯುತ್ತಾ ಕೂರಬೇಡಿ, ಅಚ್ಛೇ ದಿನ್ ಬರುವುದಿಲ್ಲ: ಸಿದ್ದರಾಮಯ್ಯ