ಧಾರವಾಡ: ಕೇಂದ್ರ ಸರ್ಕಾರ ಎಲ್‌ಐಸಿ ಪಾಲಿಸಿಗಳ ಕಂತಿನ ಮೇಲೆ ವಿ ಧಿಸಿರುವ ಜಿಎಸ್‌ಟಿ ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಕೇಂದ್ರ ಸಮಿತಿಯ ಕರೆಯ ಮೇರೆಗೆ ವಿಮಾ ಪ್ರತಿನಿಧಿಗಳು(ಏಜೆಂಟರು) ಪ್ರತಿಭಟನೆ ನಡೆಸಿದರು. ಧಾರವಾಡ ವಿಭಾಗೀಯ ಕಚೇರಿ ಮುಂದೆ ಅಖಿಲ ಭಾರತ ಜೀವ ವಿಮಾಪ್ರತಿನಿಧಿಗಳ ಸಂಘಟನೆ ಹಾಗೂ ಅಖಿಲ ಭಾರತ ಜೀವ ವಿಮಾಪ್ರತಿನಿ ಧಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಕೇಂದ್ರ ಸರ್ಕಾರವು ವಿಮಾ ಪ್ರತಿನಿಧಿಗಳಿಗೆ ಉದ್ಯೋಗ ಭದ್ರತೆ ನೀಡಬೇಕು. ಎಲ್ಲಾ ಅರ್ಹ ವಿಮಾ ಪ್ರತಿನಿಧಿಗಳಿಗೆ ಖಾತ್ರಿ ಪಿಂಚಣಿ, ಮೆಡಿಕ್ಲೇಮ್ ವ್ಯವಸ್ಥೆ ಜಾರಿಗೆ ತರಬೇಕು. ಕೇಂದ್ರ ಸರ್ಕಾರ ವಿಮಾ ಪ್ರತಿನಿ ಧಿಗಳಿಗಾಗಿ ಕಲ್ಯಾಣ ನಿಧಿ ಸ್ಥಾಪಿಸಬೇಕು. ಐಆರ್‌ಡಿಎ ಜಾರಿಗೆ ತಂದಿರುವ ಹೊಸ ಕಮಿಷನ್ ದರವನ್ನು ಎಲ್‌ಐಸಿ ಪ್ರತಿನಿಧಿಗಳಿಗೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಕರ್ನಾಟಕ ಸರ್ಕಾರ ರಾಜ್ಯದ ವಿಮಾ ಪ್ರತಿನಿಧಿಗಳಿಂದ ವೃತ್ತಿ ತೆರಿಗೆಯನ್ನು ವಾರ್ಷಿಕವಾಗಿ ಕಮಿಷನ್ ಮುಖಾಂತರ ಮರುವಳಿ ಮಾಡಲು ಸರ್ಕಾರದಿಂದ ಸೂಕ್ತ ಸುತ್ತೋಲೆಯನ್ನು ಎಲ್‌ಐಸಿ ವಿಭಾಗೀಯ ಕಚೇರಿಗಳಿಗೆ ನೀಡಬೇಕು ಹಾಗೂ ಇತರೆ ವೃತ್ತಿ ತೆರಿಗೆದಾರರಿಗೆ ನೀಡುವ ಸೌಲಭ್ಯವನ್ನು ವಿಮಾ ಪ್ರತಿನಿ ಧಿಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಲಾಯಿತು.
ಕರ್ನಾಟಕ ಸರ್ಕಾರ ರಾಜ್ಯದ ವಿಮಾ ಪ್ರತಿನಿಧಿಗಳಿಗೆ ಇ.ಎಸ್‌ಐ ಸೌಲಭ್ಯ ನೀಡಬೇಕು. ಎಲ್ ಐಸಿಯ ಎಲ್ಲಾ ಫಾರಂಗಳನ್ನು ಕನ್ನಡದಲ್ಲಿ ಮುದ್ರಣ ಮಾಡಿ ನೀಡಬೇಕು. ವಿಭಾಗೀಯ ಮಟ್ಟದ ಐಸಿಸಿ (ಔಪಚಾರಿಕ ಸಮಾಲೋಚನಾ ಸಭೆ)ಗೆ ಪ್ರತಿ ತ್ತೈಮಾಸಿಕಕ್ಕೊಮ್ಮೆ ಸಂಘಟನಾ ಮುಖಂಡರನ್ನು ಕರೆಯಬೇಕು. ಎಲ್ಲಾ ಪ್ರತಿನಿ ಧಿಗಳಿಗೆ ಗುರುತಿನ ಚೀಟಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಸಂಘಟನೆಯ ವಿಭಾಗೀಯ ಅಧ್ಯಕ್ಷ ಶಂಕರ ಕುಂಬಿ, ಲಿಖಾಯಿ ಕೇಂದ್ರ ಸಮಿತಿ ಉಪಾಧ್ಯಕ್ಷ ಸಿ.ಎ. ಜೋಸೆಫ್, ರಾಜ್ಯ ಲಿಖಾಯಿ ಸಂಘಟನೆ ಅಧ್ಯಕ್ಷ ಎಫ್.ಎಸ್. ಸಿಂದಗಿ, ಧಾರವಾಡ ವಿಭಾಗದ ಲಿಯಾಪಿ ಅಧ್ಯಕ್ಷ ಸುಭಾಸಚಂದ್ರ ಶೆಟ್ಟಿ, ಪುಷ್ಪಾ ಯಜುರ್ವೇದಿ ಇನ್ನಿತರರಿದ್ದರು.