ಮಹದೇವಪುರ: ಹೊರವರ್ತುಲ ರಸ್ತೆಯ ಬೆಳ್ಳಂದೂರಿನ ಇಬ್ಬಲೂರು ಜಂಕ್ಷನ್ ಬಳಿ ಪಾದಾಚಾರಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಶ್ವೇತ ವಸ್ತ್ರ ಧರಿಸಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ, ಬೆಳ್ಳಂದೂರು ಸಮೀಪ ನೂರಾರು ಮಾಹಿತಿ ಮತ್ತು ಜೈವಿಕ ತಂತ್ರಜಾnನ ಸಂಸ್ಥೆಗಳು, ವಾಣಿಜ್ಯ ಸಂಸ್ತೆಗಳು, ಕೈಗಾರಿಕಾ ಸಂಸ್ಥೆಗಳು ಇರುವುದರಿಂದ ಹಾಗೂ ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಆನೇಕಲ್, ಬನಶಂಕರಿ, ಮೈಸೂರು ರಸ್ತೆ, ಸಿಲ್ಕ್ಬೋರ್ಡ್, ಹೆಬ್ಟಾಳ, ಗುರುಗುಂಟೆಪಾಳ್ಯ ಸಂಪರ್ಕ ಕಲ್ಪಿಸುವುದರಿಂದ ಪ್ರತಿ ನಿತ್ಯವೂ ಲಕ್ಷಾಂತರ ವಾಹನಗಳು ಔಟರ್ ರಿಂಗ್ ರಸ್ತೆಯಲ್ಲಿ ಸಂಚಾರಿಸುತ್ತವೆ ಎಂದರು.
ಇಲ್ಲಿಯ ವಸತಿ ಸಮುಚ್ಚಯಗಳ ನಿವಾಸಿಗಳು ಹಾಗು ಟೆಕ್ ಪಾರ್ಕ್‌ನ ಉದ್ಯೋಗಿಗಳು ಬಸ್‌ನಲ್ಲಿ ಪ್ರಯಾಣಿಸಲು ಅಥವಾ ಇತರೆ ಉದ್ದೇಶಗಳಿಗೆ ರಸ್ತೆ ದಾಟುವುದು ಅನಿವಾರ್ಯವಿದ್ದು ಎಡ ಬಿಡದೆ ವೇಗವಾಗಿ ಸಾಗುವ ವಾಹನಗಳ ನಡುವೆ ರಸ್ತೆ ದಾಟುವುದು ಕಷ್ಟಸಾಧ್ಯವಾಗಿದ್ದು ಅಪಘಾತಗಳು ಹೆಚ್ಚು ಸಂ¸ವಿಸಿದ ಉದಾಹರಣೆಗಳಿವೆ,
ಕಳೆದ ನೆವಂಬರ್ 29ರಂದು ಆಕೆ¾ ಹಾರ್‌ಮನಿ ವಸತಿ ಸಮುಚ್ಚಯದ ಕಾವಲು ಸಿಬ್ಬಂದಿ ಸಂಜಯ್‌ಗಿರಿ ಬೆಳಗ್ಗೆ 7ಗಂಟೆಗೆ ರಸ್ತೆ ದಾಟುವ ವೇಳೆ ಅಪಘಾತಕ್ಕೊಳಪಟ್ಟು ಮೃತಪಟ್ಟಿದ್ದು, ಸ್ಥಳೀಯರ ಮನಕಲುಕಿದೆ. ಕೂಡಲೆ ಎಚ್ಚೆತ್ತ ನಾಗರಿಕರು ಸ್ಕೈವಾಕ್ ಬೇಕು ಆರ್‌ಐಪಿ ಸಂಜಯ್ ಎಂಬ ಅಭಿಯಾನದಡಿ ಶ್ವೇತ ವಸ್ತ್ರ ಧರಿಸಿ ರಸ್ತೆ ಬದಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು,
ಅಲ್ಲದೆ ಎರಡೂ ಬದಿಯ ರಸ್ತೆ ತಡೆದು ಸ್ಕೈವಾಕ್ ಬೇಕು ಅಕ್ಸಿಡೆಂಟ್ ಬೇಡವೆಂದು ಘೋಷಣೆ ಕೂಗಿದರು. ಇದೆ ವೇಳೆ ಸ್ಥಳೀಯ ಪಾಲಿಕೆ ಸದಸ್ಯೆ ಆಶಾ ಸುರೇಶ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‌ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
3ವರ್ಷಗಳಿಂದಲೂ ಇಲ್ಲಿಯ ವಸತಿ ಸಮುಚ್ಚಯದ ನಿವಾಸಿಗಳು, ಟೆಕ್ ಪಾರ್ಕ್‌ನ ಉದ್ಯೋಗಿಗಳು ಪಾದಾಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿಗೆ ಮನವಿಸಲ್ಲಿಸುತ್ತಲೇ ಬಂದಿದ್ದು, ಸ್ಕೈವಾಕ್ ನಿರ್ಮಿಸುತ್ತೇವೆ ಎಂದು ಭರವಸೆ ನೀಡುವ ಅಧಿಕಾರಿಗಳು ಕಾಮಗಾರಿ ನಡೆಸಲು ಮಾತ್ರ ಇಚ್ಚೆ ತೊರುತ್ತಿಲ್ಲ ಎಂದು ಸನ್ ಸಿಟಿ ಅಪಾರ್ಟ್‌ಮೆಂಟ್‌ನ ನಿವಾಸಿ ಕಾಶಿನಾಥ್ ಪ್ರಭು ತಿಳಿಸಿದರು.