ನೆಲಮಂಗಲ: ತಂಬಾಕು ಉತ್ಪನ್ನಗಳಾದ ಸಿಗರೇಟ್, ಬೀಡಿ ಮಾರಾಟ ನಿಷೇಧಿಸಿ ಕಾನೂನು ತಿದ್ದುಪಡಿಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಚಿಲ್ಲರೆ ಅಂಗಡಿ ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಇಂದಿರಾನಗರದಲ್ಲಿರುವ ಸಂಘದ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಸದಸ್ಯರು ತಾಲೂಕು ಕಚೇರಿವರೆಗೂ ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಈ ಕಾಯ್ದೆ ಸಡಿಲಗೊಳಿಸಿ: ಮೊದಲಿನಂತೆ ಚಿಲ್ಲರೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಇತ್ತೀಚಿಗೆ ಸರ್ಕಾರ ಸಣ್ಣಪುಟ್ಟ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನವಾದ ಸಿಗರೇಟ್ ಅನ್ನು ಬಿಡಿಬಿಡಿಯಾಗಿ ಚಿಲ್ಲರೆ ಹಣಕ್ಕೆ ಮಾರಾಟ ಮಾಡ ಬಾರದು ಎಂದು ಆದೇಶ ಮಾಡಿದೆ. ಇದರಿಂದ ಸಾವಿರಾರು ಸಂಖ್ಯೆಯ ಲ್ಲಿರುವ ಸಣ್ಣಪುಣ್ಣ ಚಿಲ್ಲರೆ ಅಂಗಡಿಗಳು ತಂಬಾಕು ಉತ್ಪನ್ನಗಳ ಬೀಡಿ ಮಾರಾಟ ಗಾರರು ಬೀದಿಪಾಲಾಗುತ್ತಾರೆ.
ಸರ್ಕಾರ ಇತ್ತೀಚಿಗೆ ಚಿಲ್ಲರೆ ಅಂಗಡಿ ಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಾಗೂ ಬಿಡಿ ಬಿಡಿಯಾಗಿ ಚಿಲ್ಲರೆ ರೀತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕಾಯ್ದೆ ಜಾರಿಗೆ ತಂದಿರುವುದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ತಕ್ಷಣ ಈ ಕಾಯ್ದೆ ಸಡಿಲಗೊಳಿಸಿ ಚಿಲ್ಲರೆ ವ್ಯಾಪಾರಿಗಳ ಮೇಲೆ ಸರ್ಕಾರಗಳು ದಿನಕ್ಕೊಂದು ಕಾನೂನು ತಂದು ಪರೋಕ್ಷವಾಗಿ ದೊಡ್ಡ ದೊಡ್ಡ ವ್ಯಾಪಾರಿಗಳ ಬೆಂಬಲಕ್ಕೆ ನಿಂತಿದೆ.
ತಕ್ಷಣ ಕಾನೂನು ಸಡಿಲಗೊಳಿಸಿ ಕ್ರಮಕೈಗೊ ಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾ ಗಬೇಕಾಗಿತ್ತದೆ ಎಂದು ಸಣ್ಣಪುಟ್ಟ ವ್ಯಾಪಾ ರಿಗಳ ಸಂಘದ ಅಧ್ಯಕ್ಷ ಸಂಜೀವಯ್ಯ ಎಚ್ಚರಿಸಿದರು.
ಆರೋಪ: ಚಿಲ್ಲರೆ ಅಂಗಡಿಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು 18 ವರ್ಷದೊಳಗಿನ ಯುವಕರಿಗೆ ಮಾರಾಟ ಮಾಡಬಾರದು ಹಾಗೂ ಅಂಗಡಿಗಳ ಮುಂಭಾಗದಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದನೆ ನೀಡುವಂತಹ ಜಾಹೀರಾತು ಹಾಕದೆ ನಿಯಮ ಹಾಗೂ ಕಾಲಕಾಲಕ್ಕೆ ಇಲಾಖೆ ವತಿಯಿಂದ ಬದಲಾಯಿಸುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೂ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಮಸ್ಯೆ ಎದುರಿಸ ಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.