Advertisement

ವಿವಿ ಕುಲಪತಿ ಹುದ್ದೆ ಭರ್ತಿಗೆ ಒತ್ತಾಯಿಸಿ ಪ್ರತಿಭಟನೆ

12:34 PM Sep 15, 2017 | Team Udayavani |

ಹುಬ್ಬಳ್ಳಿ: ರಾಜ್ಯದ ವಿವಿಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿಯಿಂದ ಕಾನೂನು ವಿವಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಪ್ರಭಾರಿ ಕುಲಪತಿಗೆ ಮನವಿ ಸಲ್ಲಿಸಲಾಯಿತು. 

Advertisement

ರಾಜ್ಯದಲ್ಲಿ ಸರಕಾರಿ, ಖಾಸಗಿ ಹಾಗೂ ಡೀಮ್ಡ್ ವಿವಿಗಳು ಒಳಗೊಂಡಂತೆ ಒಟ್ಟು 54 ವಿವಿಗಳಿದ್ದು ಅದರಲ್ಲಿ ಬೆಂಗಳೂರು, ಮೈಸೂರು, ರಾಜೀವಗಾಂಧಿ ಆರೋಗ್ಯ ವಿವಿ, ಕಾನೂನು ವಿವಿ, ತುಮಕೂರು ವಿವಿ, ಗೋಟಗೋಡಿ ಜಾನಪದ ವಿವಿ ಸೇರಿದಂತೆ ಇನ್ನಿತರ ವಿವಿಗಳಿಗೆ ಕುಲಪತಿ ನೇಮಕ ಮಾಡುವಲ್ಲಿ ಸರಕಾರ ನಿಷ್ಕಾಳಜಿ ವಹಿಸಿದ್ದು ಖಂಡನೀಯ. 

ಕಳೆದ ಕೆಲವು ವರ್ಷಗಳಿಂದ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡದೆ ಪ್ರಭಾರಿ ಕುಲಪತಿಗಳ ಮೇಲೆ ವಿವಿಗಳು ಕಾರ್ಯ ನಿರ್ವಹಿಸುತ್ತಿದ್ದುದು ವಿಷಾದನೀಯ ಸಂಗತಿ ಎಂದು ಪ್ರತಿಭಟನಾಕಾರರು ಹೇಳಿದರು. ಕಾಯಂ ಉಪನ್ಯಾಸಕರ ಸಂಖ್ಯೆಯೂ ಶೇ.50ಕ್ಕಿಂತ ಹೆಚ್ಚು ಖಾಲಿ ಇವೆ. ರಾಜ್ಯದ ಹಲವಾರು ವಿವಿಗಳು ಮೂಲಸೌಕರ್ಯಗಳಿಲ್ಲದೇ ನರಳುತ್ತಿವೆ. ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿ ಆಗಬೇಕು.

ಇತ್ತೀಚಿನ ದಿನಗಳಲ್ಲಿ ವಿವಿಗಳು ಜಾತಿ, ರಾಜಕೀಯ ಹಾಗೂ ಭ್ರಷ್ಟಾಚಾರದ ಕೊಂಪೆಗಳಾಗುತ್ತಿವೆ. ಈ ಎಲ್ಲದರ ಕುರಿತು ಸರಕಾರ ಕೂಡಲೇ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರಭಾರಿ ಕುಲಪತಿ ಸಿ.ಎಸ್‌. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಸಿದ್ದು ಹವಳಗಿ, ನವೀನಗೌಡ ಪಾಟೀಲ, ಶ್ರೀನಿವಾಸ ಟೊಣಪಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next