Advertisement

ಇಫ್ತಾರ್‌ ಕೂಟ ಖಂಡಿಸಿ 2ರಂದು ಪ್ರತಿಭಟನೆ

03:35 AM Jun 30, 2017 | Team Udayavani |

ಹುಬ್ಬಳ್ಳಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದನ್ನು ಖಂಡಿಸಿ ಶ್ರೀರಾಮ ಸೇನಾ ವತಿಯಿಂದ ಜುಲೈ 2ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇನೆಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ ಪೇಜಾವರ ಶ್ರೀಗಳ ವಿರುದ್ಧವಲ್ಲ. ಪವಿತ್ರ ಕ್ಷೇತ್ರವಾದ ಶ್ರೀಕೃಷ್ಣನ ಮಠದಲ್ಲಿ ಆಯೋಜಿಸಿದ್ದ ಇಫ್ತಾರ್‌ ಕೂಟ ಹಾಗೂ ನಮಾಜ್‌ ಮಾಡಿದ್ದರ ವಿರುದಟಛಿವಾಗಿದೆ. ಇನ್ನುಳಿದ ಮಠದವರು ಇದನ್ನು ಅನುಕರಣೆ ಮಾಡಬಾರದು. ಪವಿತ್ರ ಹಿಂದೂ ಕ್ಷೇತ್ರಗಳ ರಕ್ಷಣೆ ಮಾಡಬೇಕಾಗಿದೆ ಎಂದರು. ಯಾವ ಹಿಂದೂಗಳೂ ಗೋಮಾಂಸ ತಿನ್ನುವುದಿಲ್ಲ. ರಾಷ್ಟ್ರೀಯ ಸಂತ ಪೇಜಾವರ ಶ್ರೀಗಳ ಬಗ್ಗೆ ಗೌರವವಿದೆ. ಆದರೆ, ಅವರು ಹಿಂದೂಗಳು ಗೋಮಾಂಸ ತಿನ್ನುತ್ತಾರೆಂದು ಹೇಳಿಕೆ ನೀಡುವ
ಮೂಲಕ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಶ್ರೀಗಳು ತಮ್ಮ ಹೇಳಿಕೆ ಹಿಂಪಡೆಯಬೇಕು. ಸೌಹಾರ್ದ ಎನ್ನುವುದು ಕೇವಲ ಹಿಂದೂಗಳ ಕಡೆಯಿಂದ ಅಲ್ಲ, ಎರಡು ಕಡೆಯಿಂದಲೂ ಆಗಬೇಕು. ಪೇಜಾವರ ಶ್ರೀಗಳಿಂದ ಕ್ಷಮೆಗೆ ಅಪೇಕ್ಷೆ ಪಟ್ಟಿಲ್ಲ. ಆದರೆ, ಇನ್ನುಳಿದ ಮಠಾಧೀಶರಿಗೂ ಎಚ್ಚರಿಕೆ ಕೊಡುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಮತ್ತಿತರ ಸಂಘಟನೆಗಳು ಬೆಂಬಲ ನೀಡಿವೆ ಎಂದರು.

ಪ್ರಧಾನಿ ಮೋದಿ ಅವರು ಇದುವರೆಗೂ ಯಾವುದೇ ಇಫ್ತಾರ್‌ ಕೂಟದಲ್ಲಿ ಭಾಗಿಯಾಗಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶ್ವೇತಭವನದಲ್ಲಿ ಇಫ್ತಾರ್‌ ಕೂಟ ರದ್ದುಪಡಿಸಿದ್ದಾರೆ. ಹಾಗಿದ್ದ ಮೇಲೆ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಮಾಡುವ ಅವಶ್ಯಕತೆ ಏನಿತ್ತು?. ಬಿಜೆಪಿಯವರು ಹಿಂದುತ್ವ ಎಂದು ಹೇಳಿಕೊಂಡು ಮಠದಲ್ಲಿ ನಡೆದಿರುವ ಇಫ್ತಾರ್‌
ಕೂಟ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಒಬ್ಬರೇ ಮಠದಲ್ಲಿ ನಡೆದ ಇಫ್ತಾರ್‌ ಕೂಟ ಮತ್ತು ನಮಾಜ್‌ನ್ನು ಖಂಡಿಸುವ ಮೂಲಕ ಗಟ್ಟಿತನ ತೋರಿದ್ದಾರೆ ಎಂದು ಹೇಳಿದರು.

ಸಮಾಜದ ಸಾಮರಸ್ಯಕ್ಕಾಗಿ ಹೊಸ ಚಿಂತನೆ ಮೂಲಕ ಹೊಸ ಪ್ರಯತ್ನಗಳನ್ನು ಮಾಡುವ ಅಪರೂಪದ ಸಂತ 
ಪೇಜಾವರ ಶ್ರೀಗಳು. ರಂಜಾನ್‌ ತಿಂಗಳಲ್ಲಿ ಮುಸ್ಲಿಮರಿಗೆ ಕೃಷ್ಣಮಠದಲ್ಲಿ ಇμ¤ಯಾರ್‌ ಕೂಟ ಏರ್ಪಡಿಸಿದ್ದು
ಆರೋಗ್ಯಕರ ಹೆಜ್ಜೆ. ಇದನ್ನು ಎಲ್ಲರೂ ಒಂದೇ ಧ್ವನಿಯಲ್ಲಿ ಬೆಂಬಲಿಸಬೇಕು ಮತ್ತು ಅವರ ಜತೆ ನಿಲ್ಲಬೇಕು. ಪ್ರಮೋದ್‌ ಮುತಾಲಿಕ್‌ ವಿಚಾರಧಾರೆ ಮತ್ತು ಕಾರ್ಯವೈಖರಿಯ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಶೋಭಾ ಕರಂದ್ಲಾಜೆ ಯಾವ ಅರ್ಥದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ. ಮಠದಲ್ಲಿ ನಮಾಜ್‌ ಮಾಡಿದ್ದರೂ, ಅದೊಂದು ಒಳ್ಳೆಯ ಉದ್ದೇಶಕ್ಕೆ ಆಗಿದೆ. ಈ ವಿಚಾರದಲ್ಲಿ ಲೋಪ ಆಗಿದ್ದರೆ ಸರಿಪಡಿಸಿಕೊಳ್ಳಬೇಕು.
ಎಸ್‌. ಸುರೇಶ್‌ಕುಮಾರ್‌, ಬಿಜೆಪಿ ರಾಜ್ಯ ವಕ್ತಾರ

ನನ್ನ ತಲೆ ಕತ್ತರಿಸಿದರೂ ಹಾಗೂ ಜೀವ ಹೋದರೂ ಇಫ್ತಾರ್‌ ಕೂಟ ಆಯೋಜಿಸಲ್ಲ ಹಾಗೂ ಅದರಲ್ಲಿ ಭಾಗಿಯಾಗಲ್ಲ.
ದೇಶದ್ರೋಹಿ ಗೋಹಂತಕರ ವಿರುದಟಛಿ ಕೈ ಜೋಡಿಸಲ್ಲ.
ಪ್ರಮೋದ ಮುತಾಲಿಕ, ಶ್ರೀರಾಮ ಸೇನೆ ಮುಖ್ಯಸ್ಥ.

Advertisement

ಉಡುಪಿಯ ಪೇಜಾವರ ಶ್ರೀಗಳ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಪೇಜಾವರ ಶ್ರೀಗಳು 
ಹಿರಿಯರಿದ್ದಾರೆ. ಅವರು ಇಫ್ತಾರ್‌ ಕೂಟ ಏರ್ಪಡಿಸಿರುವುದು  ಸ್ವಾಗತಾರ್ಹ. ಮತ್ತೂಬ್ಬರ ಧರ್ಮವನ್ನು ಗೌರವಿಸುವುದು ಒಳ್ಳೆಯ ಬೆಳವಣಿಗೆ.
ತನ್ವೀರ್‌ ಸೇs… ಶಿಕ್ಷಣ ಸಚಿವ

ಪೇಜಾವರ ಶ್ರೀಗಳು ಹಿಂದೆ ಬಿಜೆಪಿ ಪರ ಮತ ಯಾಚಿಸಿದ್ದರಿಂದ ಅವರ ಮೇಲಿನ ಅಭಿಮಾನ ಕಡಿಮೆಯಾಗಿದೆ. ಈಗ ಅವರು ಅದರಿಂದ ಹೊರ ಬರಲು ಇಫ್ತಾರ ಕೂಟ ಏರ್ಪಡಿಸಿರಬಹುದು. ದೇವ ಸ್ಥಾನದಲ್ಲಿ ಯಾವುದೇ ನಮಾಜ್‌ ನಡೆದಿಲ್ಲ. ಸಾಮರಸ್ಯಕ್ಕಾಗಿ ಊಟದ ಹಾಲ್‌ನಲ್ಲಿ ಇಫ್ತಾರ್‌ ಕೂಟ ವ್ಯವಸ್ಥೆ ಮಾಡಿದ್ದಾರೆ. ಅದನ್ನು ತಪ್ಪು ದೃಷ್ಠಿಯಿಂದ ನೋಡುವುದು ಸರಿಯಲ್ಲ.
ಎಂ.ಆರ್‌.ಸೀತಾರಾಂ, ಯೋಜನೆ, ಸಾಂಖೀಕ, ವಿಜ್ಞಾನ-ತಂತ್ರಜ್ಞಾನ ಸಚಿವ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಮುಸಲ್ಮಾನ ಬಾಂಧವರಿಗೆ ಇಫ್ತಾರ್‌ ಕೂಟ ಏರ್ಪಡಿಸಿದ್ದ ಕ್ರಮ ಸರಿಯಾಗಿದೆ. ಪೇಜಾವರ ಶ್ರೀಗಳು ಕ್ರಾಂತಿಕಾರಿ ಸನ್ಯಾಸಿ. ಅವರ ನಡೆ ಪ್ರಶ್ನಿಸುವಂತಿಲ್ಲ. ಇಫ್ತಾರ್‌ ಕೂಟ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕೆ.ಎಸ್‌.ಈಶ್ವರಪ್ಪ, ಪ್ರತಿಪಕ್ಷ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next