Advertisement

ನಿವೇಶನ ಕಬಳಿಕೆ ತನಿಖೆಗಾಗಿ ಉಪವಾಸ ಸತ್ಯಾಗ್ರಹ

02:48 PM Dec 22, 2020 | Suhan S |

ಶ್ರೀರಂಗಪಟ್ಟಣ: ಪುರಸಭಾ ವ್ಯಾಪ್ತಿಯಲ್ಲಿ ಬಡವರ ಆಶ್ರಯ ಯೋಜನೆಯ ನಿವೇಶನಗಳನ್ನು ಜನಪ್ರತಿನಿಧಿಗಳು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ, ನಾಗರಿಕ ಹಿತ ರಕ್ಷಣಾ ಸಮಿತಿ ಸದಸ್ಯರು ಪುರಸಭೆ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

Advertisement

ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಚಂದನ್‌ ನೇತೃತ್ವದಲ್ಲಿ ಕಾರ್ಯಕರ್ತರು, ಪುರಸಭೆಯಲ್ಲಿ ಅವ್ಯವ ಹಾರ ನಡೆದಿದೆ. ಪುರಸಭೆ ಮುಖ್ಯಾಧಿಕಾರಿ ಸೇರಿ ದಂತೆ ಕೆಲ ಜನಪ್ರತಿನಿಧಿಗಳು ಬಡವರು, ನಿವೇಶನ ರಹಿತರಿಗೆ ಆಶ್ರಯ ಯೋಜನೆಯಲ್ಲಿ ನೀಡಲಾಗಿದ್ದ ನಿವೇಶನಗಳನ್ನು ಕಬಳಿಕೆ ಮಾಡಿದ್ದಾರೆ. ಜನಪ್ರತಿನಿಧಿಗಳು ಹಾಗೂ ಉಳ್ಳವರಿಗೆ ಈ ನಿವೇಶನಗಳನ್ನು ನೀಡಿರುವುದು ಕಂಡು ಬಂದಿದ್ದು, ಇವೆಲ್ಲವೂ ಪುರಸಭೆ ಅವ್ಯವಹಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕೊ›àಶ ವ್ಯಕ್ತಪಡಿಸಿದರು.

ನಿವೇಶನ ಹಿಂಪಡೆದುಕೊಳ್ಳಿ: ಜನಪ್ರತಿನಿಧಿಗಳು ಬೇರೆಯವರ ಆಶ್ರಯಯೋಜನೆಗಳ ನಿವೇಶದ ಅಕ್ರಮ ಖಾತೆಗಳನ್ನು ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಅಧಿಕಾರಿಗಳು ತನಿಖೆ ಮಾಡಬೇಕು. ಅಕ್ರಮವೆಸಗಿರುವ ಜನ ಪ್ರತಿನಿಧಿಗಳಿಂದ ನಿವೇಶನವನ್ನು ಸರ್ಕಾರಕ್ಕೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹಕ್ಕು ಪತ್ರ ದುರ್ಬಳಕೆಗೆ ಖಂಡನೆ: ಸಮಿತಿಕಾರ್ಯದರ್ಶಿ ಮದನ್‌ರಾವ್‌ ಮಾತನಾಡಿ,ನಿವೇಶನ ರಹಿತರಿಗೆ ಆಶ್ರಯಯೋಜನೆಯಿಂದ ನೀಡಿದ ನಿವೇಶನದ ಹಕ್ಕು ಪತ್ರ ದುರ್ಬಳಕೆ ಮಾಡಿ, ಅಕ್ರಮ ಖಾತೆಗಳನ್ನು ಸ್ಥಳಿಯ ಜನಪ್ರತಿ ನಿಧಿಗಳ ಹೆಸರಿಗೆ ಖಾತೆಯಾಗಿರುವುದು ಖಂಡನೆ. ಬಡವರ ಪಾಲು ಉಳ್ಳವರ ಪಾಲಾಗುತ್ತಿದೆ. ಈ ಅವ್ಯವಹಾರದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದು, ಹಲವು ವರ್ಷದಿಂದ ಕಂದಾಯ ಬಾಕಿ ಇರುವ ನಿವೇಶನಗಳಿಗೆ ಇಲ್ಲಿನ ಜನಪ್ರತಿ ನಿಧಿಗಳೇ ಬೇರೆ ನಿವೇಶನಗಳಿಗೆ ಕಂದಾಯ ಕಟ್ಟಿ ಅಕ್ರಮಖಾತೆಮಾಡಿಸಿಕೊಳ್ಳುತ್ತಿದ್ದಾರೆ.ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ತಹಶೀಲ್ದಾರ್‌ ಎಂ.ವಿ.ರೂಪ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿಸಸ್ಥರ ವಿರುದ್ಧ ಕ್ರಮ ಕೈಗೊಂಡು ಅಕ್ರಮ ಖಾತೆಯಾಗಿದ್ದರೆ ಅದನ್ನು ರದ್ದುಗೊಳಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಅವರಿಗೆ ಸೂಚಿಸಿದರು. ಪುರಸಭೆ ಉಪಾಧ್ಯಕ್ಷ ಎಸ್‌.ಪ್ರಕಾಶ್‌, ಸದಸ್ಯ ರಾದ ಕೃಷ್ಣಪ್ಪ, ಶಿವು, ಸತೀಶ್‌, ಕೆಂಪೇಗೌಡ ರಮೇಶ್‌, ಅಭಿಷೇಕ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next