Advertisement

ಗೋಹತ್ಯೆ ಕಾಯ್ದೆ ತಿದ್ದುಪಡಿ ರದ್ದುಪಡಿಸಲು ಆಗ್ರಹ

04:19 PM Feb 18, 2021 | Team Udayavani |

ಹಾಸನ: ಪಿಟಿಸಿಎಲ್‌ (ಪ್ರೋಹಿಬಿಷನ್‌ ಆಫ್ ಟ್ರಾನ್ಸ್‌ಫ‌ರ್‌ ಆಫ್ ಸಟೈìನ್‌ ಲ್ಯಾಂಡ್‌) ಕಾಯ್ದೆ ತಿದ್ದುಪಡಿ, ಕೃಷಿ ಹಾಗೂ ಗೋಹತ್ಯಾ ಕಾಯ್ದೆ ರದ್ದು ಮಾಡಬೇಕು. ತೈಲ ಮತ್ತು ಸಿಲಿಂಡರ್‌ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಭಾರತೀಯ ಪರಿವರ್ತನಾ ಸಂಘ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

Advertisement

ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಪ್ರತಿಭಟನಾಕಾರರು, ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮೂಲ ಸೌಕರ್ಯ ವಂಚಿತರಾಗಿರುವ ಪರಿಶಿಷ್ಟ ಜಾತಿ, ಪಂಗಡದವರನ್ನು ಸ್ವಾವಲಂಬಿ ಗಳನ್ನಾಗಿ ಮಾಡಲು ಕರ್ನಾಟಕ ಸರ್ಕಾರ ಭೂಮಿ ಮಂಜೂರು ಮಾಡಿತ್ತು. ಈ ಭೂಮಿ ಯನ್ನು ಬೇರೆಯವರು ಖರೀದಿಸದಂತೆಯೂ ನಿಯಮ ರೂಪಿಸಿತ್ತು. ಪರಭಾರೆ ಮಾಡಿದ್ದರೆ ಅದನ್ನು ಮತ್ತೆ ನ್ಯಾಯಾಲಯದ ಮೂಲಕ ವಾಪಸ್‌ ಪಡೆದುಕೊಳ್ಳುವ ಭದ್ರತೆಯನ್ನು ಸರ್ಕಾರ ನೀಡಿತ್ತು. ಆದರೆ ಈಗ ಭಾರತದ ಸರ್ವೋತ್ಛ ನ್ಯಾಯಾಲಯ ಒಂದು ನಿರ್ದಿಷ್ಟ ಅವಧಿಯಲ್ಲಿ ಅರ್ಜಿ ಸಲ್ಲಿಸದಿದ್ದಲ್ಲಿ ಪರಭಾರೆ ಭೂಮಿಯನ್ನು ಪರಿಶಿಷ್ಟಜಾತಿ, ಪಂಗಡಗಳು ವಾಪಸ್ಸು ಪಡೆಯಲು ಆಗುವುದಿಲ್ಲ ಎಂದು ತೀರ್ಪು ನೀಡಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆಂದರು.

ಭೂ ಪರಭಾರೆ ಮಾಡಿದವರು ನಿರ್ದಿಷ್ಟ ಅವಧಿಯಲ್ಲಿ ಅರ್ಜಿ ಹಾಕಿಲ್ಲ ಎಂಬ ನೆಪಹೇಳಿ ಕರ್ನಾಟಕದ ವಿವಿಧ ನ್ಯಾಯಾಲಯಗಳು ಪರಿಶಿಷ್ಟ ಜಾತಿ, ಪಂಗಡಗಳ ಜನ ಸಲ್ಲಿಸಿದ ಅರ್ಜಿಗಳನ್ನೆಲ್ಲಾ ವಜಾಮಾಡಿ ಭೂಮಿ ಕಿತ್ತು ಕೊಳ್ಳುತ್ತಿದ್ದಾರೆ. ಈ ರೀತಿ ಪರಭಾರೆ ಭೂಮಿ ಯನ್ನು ಸರ್ಕಾರ ವಾಪಸ್‌ ಪಡೆದು ಪರಿಶಿಷ್ಟ ಜಾತಿಯ ಪದವೀಧರ ನಿರುದ್ಯೋಗಿಗಳಿಗೆ ತಲಾ 2 ಎಕರೆಯಂತೆ ಹಂಚಿಕೆ ಮಾಡಬೇಕು.ಈ ಭೂಮಿ ಯಾವುದೇ ಕಾರಣಕ್ಕೂ ಶ್ರೀಮಂತರ ಪಾಲಾಗಲು ಬಿಡಬಾರದೆಂದರು.

ಬೆಲೆ ಏರಿಕೆ ತಡೆಗಟ್ಟಿ: ರಾಜ್ಯ ಸರ್ಕಾರ ಇತ್ತೀಚೆಗೆ ಆತುರವಾಗಿ ಜಾರಿಗೆ ತಂದಿರುವ ಗೋಹತ್ಯಾ ನಿಷೇಧ ಕಾನೂನು ರೈತರನ್ನು ತೀರಾ ಸಂಕಷ್ಟಕ್ಕೀಡು ಮಾಡಿದೆ. ದನದ ಮಾಂಸ ತಿನ್ನುವವರಿಗೆ ಕುರಿ – ಕೋಳಿ ಹಾಗೂ ಮೇಕೆ ಮಾಂಸಕ್ಕೆ ಹೋಗಲು ಪರ್ಯಾಯ ಮಾರ್ಗವಿದೆ. ಆದರೆ, ರೈತರು ಪಶುಗಳನ್ನು ಸಾಕುವ – ಸಂರಕ್ಷಿಸುವ ಹಾಗು ಮಾರಾಟ ಮಾಡುವ ಹಕ್ಕನ್ನು ಕಳೆದುಕೊಳ್ಳ ಲಿದ್ದಾರೆ. ಸರ್ಕಾರಗಳು ಈ ಕರಾಳ ಕಾನೂನು ಗಳನ್ನು ವಾಪಸ್‌ ಪಡೆಯಬೇಕು. ಕೇಂದ್ರದ ಸರ್ಕಾರ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಸಿಲಿಂಡರ್‌ಗಳ ಬೆಲೆ ಏರಿಕೆ ತಡೆಗಟ್ಟ ಬೇಕೆಂದರು.

ಹಿರಿಯ ದಲಿತ ಸಂಘಟನೆಗಳ ಮುಖಂಡರಾದ ಕೃಷ್ಣದಾಸ್‌, ಸ್ಟೀವನ್‌ ಪ್ರಕಾಶ್‌, ಕಾಡೂÉರು ಮೋಹನ್‌, ವಿನೋದ್‌ ರಾಜು, ಎನ್‌.ಯೋಗೀಶ್‌, ರಾಮು ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next