Advertisement

ಹೆಸ್ಕಾಂ ವಿಭಾಗ ಕಚೇರಿ ಎದುರು ಪ್ರತಿಭಟನೆ-ಆಕ್ರೋಶ

01:44 PM Mar 29, 2022 | Team Udayavani |

ಘಟಪ್ರಭಾ: ಪ್ರತಿ ಹಳ್ಳಿಗಳಲ್ಲಿ 7 ಗಂಟೆ ತ್ರಿಫೇಸ್‌ ವಿದ್ಯುತ್‌ ನೀಡುವುದು, ವಿದ್ಯುತ್‌ ತಂತಿ ನವೀಕರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೋಕಾಕ ತಾಲೂಕು ಘಟಕದಿಂದ ಹೆಸ್ಕಾಂ ವಿಭಾಗ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ಬೆಳಗ್ಗೆ ಕಚೇರಿ ಎದುರು ಜಮಾಯಿಸಿದ ಕಾರ್ಯಕತರು ಪ್ರತಿಭಟನೆ ನಡೆಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವ ಪ್ರಕಾರ ಪ್ರತಿ ಹಳ್ಳಿಗಳಲ್ಲಿಯೂ ಹಗಲು 7 ಗಂಟೆಗಳ ಕಾಲ್‌ ತ್ರಿಫೇಸ್‌ ವಿದ್ಯುತ್‌ ಪೂರೈಸಬೇಕು. ಲೋಡ್‌ ಶೆಡ್ಡಿಂಗ್‌ ನೆಪವಿಟ್ಟುಕೊಂಡು ರಾತ್ರಿ ಕರೆಂಟ್‌ ಕಟ್‌ ಮಾಡುವುದು ನಿಲ್ಲಿಸಬೇಕು. ಸಾಯಂಕಾಲ 6ರಿಂದ ಬೆಳಗ್ಗೆ 6ರವರೆಗೆ ಸಿಂಗಲ್‌ ಫೇಸ್‌ ವಿದ್ಯುತ್‌ ನಿರಂತರ ನೀಡುವಂತೆ ಆಗ್ರಹಿಸಿದರು.

ಪ್ರತಿ ಹಳ್ಳಿಗಳಲ್ಲಿ ವಿದ್ಯುತ್‌ ತಂತಿಗಳನ್ನು ನವೀಕರಣ ಮಾಡಬೇಕು. ಹಳ್ಳಿಗಳಲ್ಲಿ ಲೈನ್‌ಮನ್‌ಗಳು ಟಿ.ಸಿ, ಕೇಬಲ್‌ ಮತ್ತು ಆಯಿಲ್‌ ಚೇಂಜ್‌ ಮಾಡಲು ಹಣ ಕೇಳಿ ಪಡೆಯುತ್ತಿದ್ದು ಮತ್ತು ರೈತರಿಗೆ ಸರಿಯಾಗಿ ಮಾಹಿತಿ ನೀಡದೆ ರೈತರನ್ನು ವಂಚಿಸುತ್ತಿರುವುದನ್ನು ನಿಲ್ಲಿಸಬೇಕು. ಜತೆಗೆ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೇನೆ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ವೇಳೆ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ, ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪುರ, ತಾಲೂಕು ಅಧ್ಯಕ್ಷ ಮುತ್ತೆಪ್ಪ ಭಾಗಣ್ಣವರ, ಶಂಕರ ಮದಿಹಳ್ಳಿ, ಕುಮಾರ ತಿಗಡಿ, ರಾಯಪ್ಪ ಗೌಡಪ್ಪನವರ, ವೆಂಕಪ್ಪ ಕೊಪ್ಪದ, ರಮೇಶ ತಿಗಡಿ, ಲಕ್ಷ್ಮಣ ಹಳ್ಳೂರ, ಮಲ್ಲೇಶ ನಾಯ್ಕ, ಸಿದ್ದಪ್ಪ ಗೌಡಪ್ಪನವರ, ಅವಿನಾಶ್‌ ಖಾನಪ್ಪನವರ, ಶಿವಪ್ಪ ಹೊಸಮನಿ, ಸಿದ್ದಪ್ಪ ತಪಸಿ, ರಮೇಶ ವ್ಯಾಪರಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next