Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಸರಕಾರಿ ಹುದ್ದೆ ಆಗ್ರಹಿಸಿ ಧರಣಿ

02:45 AM Dec 11, 2018 | Karthik A |

ಉಡುಪಿ: ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಡ್ಡರ್ಸೆ ಗ್ರಾಮದ ದೇವೇಂದ್ರ ಸುವರ್ಣ ಸೋಮವಾರ ಸಾಂಕೇತಿಕ ಧರಣಿ ನಡೆಸಿದ್ದಾರೆ. ದೇವೇಂದ್ರ ಸುವರ್ಣ ಅವರು ಅಪಘಾತದಲ್ಲಿ ಶಾಶ್ವತ ಅಂಗವಿಕಲರಾಗಿದ್ದಾರೆ. ಅವರ ಸಹೋದರ (ತಮ್ಮ) ಶಶಿಧರ ಸುವರ್ಣ ಮೆಸ್ಕಾಂನಲ್ಲಿ ಕರ್ತವ್ಯ ನಿರತರಾಗಿರುವಾಗಲೇ ಮೃತಪಟ್ಟಿದ್ದರು. ಅವರ ಇಡೀ ಕುಟುಂಬವು ಅವರ ತಮ್ಮನನ್ನೇ ಅವಲಂಬಿತವಾಗಿತ್ತು. ಈ ಕಾರಣ ಮಾನವೀಯ ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ಸರಕಾರಿ ಹುದ್ದೆ ನೀಡುವಂತೆ 4 ವರ್ಷಗಳಿಂದ ಪ್ರಯತ್ನಿಸಿದರೂ ಫ‌ಲಕಾರಿಯಾಗದ ನೆಲೆಯಲ್ಲಿ ದೇವೇಂದ್ರ ಸುವರ್ಣರು ಧರಣಿ ನಡೆಸುತ್ತಿದ್ದಾರೆ.

Advertisement

ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ 5 ಬಾರಿ ಭಾಗವಹಿಸಿದ್ದಲ್ಲದೆ, ಮುಖ್ಯಮಂತ್ರಿಗಳ ಮನೆಗೆ ಖುದ್ದಾಗಿ 10 ಬಾರಿ ಭೇಟಿ ನೀಡಿ ಸಮಸ್ಯೆಯನ್ನು ತೋಡಿಕೊಂಡಿದ್ದೇನೆ. ಇದುವರೆಗೂ ಅಂಗವಿಕಲನಾದ ನನಗೆ ಮಾನವೀಯತೆ ತೋರದೆ 20 ಬಾರಿ ಬೆಂಗಳೂರಿಗೆ ನನ್ನನ್ನು ತಿರುಗಿಸಿ ಅವಮಾನಿಸಿದ್ದಲ್ಲದೆ, ನನ್ನ ಆರ್ಥಿಕ ಪರಿಸ್ಥಿತಿ ಕುಂಠಿತವಾಗುವಂತೆಯೂ ಮಾಡಿದ್ದಾರೆ. ಇದರಿಂದ ಸಾಕಷ್ಟು ಮಾನಸಿಕ ನೋವನ್ನು ಅನುಭವಿಸುತ್ತಿದ್ದೇನೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next