Advertisement

ಪಕ್ಷಾತೀತವಾಗಿ ಬೆಮೆಲ್‌ ಉಳಿಸಲು ಹೋರಾಟ

03:59 PM Mar 03, 2021 | Team Udayavani |

ಕೆಜಿಎಫ್: ರಾಜಕಾರಣಿಗಳು ಜನರ ವಿಶ್ವಾಸ ಉಳಿಸಿ ಕೊಳ್ಳಬೇಕಾದರೆ ಬೆಮೆಲ್‌ ಖಾಸಗೀಕರಣದ ವಿರುದ್ಧ ಹೋರಾಟ ಮಾಡಬೇಕು ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Advertisement

ಬೆಮೆಲ್‌ ನಗರದಲ್ಲಿ ಬೆಮೆಲ್‌ ಕಾರ್ಮಿಕರು ಖಾಸಗೀಕರಣ ವಿರೋಧಿಸಿ ನಡೆಸುತ್ತಿರುವ ಸರದಿನಿರ ಶನದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿ, ರಾಜಕಾರಣಿಗಳು ನೈತಿಕ ಜವಾಬ್ದಾರಿ ಹೊರ ಬೇಕು. ಪಕ್ಷಾತೀತವಾಗಿ ಬೆಮೆಲ್‌ ಉಳಿಸಲು ಹೋರಾಟ ನಡೆಸಬೇಕು ಎಂದರು.

ಕಾಂಗ್ರೆಸ್‌ ಪಕ್ಷದ ಎಲ್ಲಾ ಶಾಸಕರು ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ. ಆದರೆ ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಹೋರಾಟ ಮಾಡ ಬೇಕು. ಇಲ್ಲವಾದಲ್ಲಿ ರಾಜಕಾರಣಿಗಳನ್ನು ಇತಿಹಾಸದಲ್ಲಿ ಕ್ಷಮಿಸುವುದಿಲ್ಲ. ಮೊದಲ ಮುಖ್ಯ ಮಂತ್ರಿ ಕೆ.ಸಿ.ರೆಡ್ಡಿ ಈ ಸ್ಥಳದವರು. ಎಂ.ವಿ.ಕೃಷ್ಣಪ್ಪ ಇದೇ ಭೂಮಿಯವರು. ಜಿಲ್ಲೆಗೆ ಕೀರ್ತಿ ತಂದರಕ್ಷಣಾ ಇಲಾಖೆಗೆ ಸೇರಿದ ಬೆಮೆಲ್‌ ಕಾರ್ಖಾನೆ ಯನ್ನು ಖಾಸಗೀಕರಣ ಮಾಡಲು ಬಿಟ್ಟರೆ, ನಾವು ರಾಜಕಾರಣ ಮಾಡಿ ಪ್ರಯೋಜನವಿಲ್ಲ ಎಂದರು.

ಬೆಮೆಲ್‌ ಉಳಿಯುವುದು ಕೇವಲ ಕಾರ್ಮಿಕರ ಸಂಸಾರ ನಿರ್ವಹಣೆಗೆ ಮಾತ್ರ ಅಲ್ಲ. ಖಾಸಗೀಕರಣ ವಾದರೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬು ದನ್ನು ಅರಿತು ಹೋರಾಟ ನಡೆಯುತ್ತಿದೆ. ಈ ಪ್ರತಿಭಟನೆಗೆ ಎಲ್ಲರೂ ಸಹಕಾರ ನೀಡಬೇಕಾಗಿದೆ. ಜಿಲ್ಲೆಯ ಎಲ್ಲಾ ಶಾಸಕರು ಕೂಡ ಕಾರ್ಮಿಕರ ಪರ ವಾಗಿ ಇರುತ್ತೇವೆ ಎಂದು ನಂಜೇಗೌಡರು ಹೇಳಿದರು.

ವರಿಷ್ಠರನ್ನು ಕರೆಸಿ ಚಳವಳಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಲಾಭಮಾಡುವ ಕಂಪನಿಗಳನ್ನು ಮಾತ್ರ ಕೇಂದ್ರ ಸರ್ಕಾರಮಾರಾಟ ಮಾಡುತ್ತಿದೆ. ಅಂಬಾನಿ, ಅದಾನಿಅವರನ್ನು ಮುಂದೆ ಇಟ್ಟುಕೊಂಡು ದುಡ್ಡು ಮಾಡಲು ಹೊರಟಿದೆ ಎಂದು ಆರೋಪಿಸಿದರು.

Advertisement

ಈ ಹಿಂದೆ ಕೂಡ ಖಾಸಗೀಕರಣದ ವಿರುದ್ಧ ಹಿಂದಿನ ಸಂಸದ ಕೆ.ಎಚ್‌.ಮುನಿಯಪ್ಪ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಖಾಸಗೀಕರಣ ನಿಲ್ಲಿಸಿದ್ದರು. ಶ್ರಮ ವಹಿಸಿ ಕಾರ್ಯನಿರ್ವಹಿಸಿಕಂಪನಿಯನ್ನು ಲಾಭದತ್ತ ಕೊಂಡೊಯ್ದಿರುವಕಾರ್ಮಿ ಕರನ್ನು ಅಭಿನಂದಿಸಬೇಕಾಗಿತ್ತು. ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಪಕ್ಷ ಎಲ್ಲಾ ರೀತಿಯ ಬೆಂಬಲ ನೀಡುತ್ತದೆ. ನಮ್ಮ ಮುಖಂಡರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕರೆಸಿ ಚಳವಳಿಯಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.

ಸಹಕಾರ ಮರೆಯಲ್ಲ: ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿ, ದೆಹಲಿಯಲ್ಲಿಖಾಸಗೀಕರಣದ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಹೋರಾಟದಲ್ಲಿ ಮಾಜಿಸಂಸದ ಕೆ.ಎಚ್‌.ಮುನಿಯಪ್ಪ ಭಾಗವಹಿಸಿಬೆಂಬಲ ನೀಡಿದ್ದರು. ರಕ್ಷಣಾ ಸಚಿವರನ್ನು ಭೇಟಿ ಮಾಡಿಸಿದ್ದರು. ಅವರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next