Advertisement

ಕನಿಷ್ಠ ವೇತನಕ್ಕಾಗಿ ಪ್ರತಿಭಟನೆ

07:27 AM Feb 16, 2019 | Team Udayavani |

ಮೈಸೂರು: ಬಿಸಿಯೂಟ ಕಾರ್ಯಕರ್ತೆ ಯರಿಗೆ ಕನಿಷ್ಠ ವೇತನ ಜಾರಿ ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

Advertisement

ದೇಶಾದ್ಯಂತ 12 ಲಕ್ಷ ಸರ್ಕಾರಿ ಶಾಲೆಗಳಲ್ಲಿ 11 ಕೋಟಿ ರೂ.ಗೂ ಹೆಚ್ಚು ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಪಡೆ ಯುತ್ತಿದ್ದಾರೆ. ಆದರೆ, ಈ ಯೋಜ ನೆಯ ಯಶಸ್ಸಿಗೆ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಕಡಿಮೆ ವೇತನ ನೀಡಿ ವಂಚಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೇಂದ್ರ ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು, ಕೆಲಸದ ಭದ್ರತೆ ಒದಗಿಸಿ, ಅವರನ್ನೂ ಶಾಲಾ ಸಿಬ್ಬಂದಿ ಆಗಿ ಪರಿವರ್ತಿಸ ಬೇಕು. ಬಿಸಿಯೂಟ ಕಾರ್ಮಿ ಕರೆಂದು ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ತರಬೇಕು. ಖಾಸಗಿ ಯವರಿಗೆ ಕೊಟ್ಟಿರುವ ಬಿಸಿಯೂಟ ಪೂರೈಕೆಯನ್ನು ಹಿಂಪಡೆಯಬೇಕು. ದಸರಾ ಹಾಗೂ ಬೇಸಿಗೆ ರಜೆಗಳಲ್ಲಿ ಸಂಬಳ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಅವರು ಒತ್ತಾಯಿಸಿದರು.

ಎಐಟಿಯುಸಿ ಸಂಚಾಲಕ ಕೆ.ಜೆ.ಸೋಮರಾಜೇ ಅರಸ್‌, ಮಹದೇವಮ್ಮ, ಪದ್ಮಮ್ಮ, ಸಾವಿತ್ರಮ್ಮ, ಜಯಂತಿ, ಭಾಗ್ಯಾ, ಪ್ರೇಮ, ವನಜಾಕ್ಷಿ, ಚಂದ್ರಮ್ಮ, ಪಾರ್ವತಮ್ಮ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next