ದೊಡ್ಡಬಳ್ಳಾಪುರ: ಉತ್ತರ ಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ ನಡೆದಿರುವ ಹತ್ಯೆ ಘಟನೆ ಖಂಡಿಸಿ, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ವಿವಿಧ ಸಂಘಟನೆಗಳಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲಿನ ವಾಹನ ಚಲಾಯಿಸಿ, 8 ಜನರ ಬರ್ಬರ ಹತ್ಯೆ ತೀವ್ರ ಖಂಡನೀಯ.
ಇದನ್ನೂ ಓದಿ;–
ಸಚಿವ ಆಶೋಕ್ ಪ್ರಚಾರ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಲಿ: ಚಲುವರಾಯಸ್ವಾಮಿ
ದೇಶದಾದ್ಯಂತ ಬೆಳೆಯುತ್ತಿರುವ ಚಳವಳಿ ಮುರಿಯುವ ಸಂಚಾಗಿದೆ ಎಂದು ದೂರಿದರು.ಭಾನುವಾರ ಉತ್ತರ ಪ್ರದೇಶದ ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್ ಮಿಶ್ರ ಹಾಗೂ ಅವರ ಮಗ ಮತ್ತು ಸಂಬಂಧಿಗಳು ದುಷ್ಕೃತ್ಯದಲ್ಲಿ ಪಾಲ್ಗೊಂಡು ಗೂಂಡಾಗಳಂತೆ ವರ್ತಿಸಿದ್ದಾರೆ. ಇಂತಹದ್ದೊಂದು ಅಮಾನುಷವನ್ನು ಪ್ರಧಾನ ಮಂತ್ರಿಗಳು ಖಂಡಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಯಾವುದೇ ದೌರ್ಜನ್ಯ ರೈತ ಚಳವಳಿ ಮುರಿಯಲಾಗದೆಂಬುದು ಕಳೆದೆರೆಡು ವರ್ಷಗಳಿಂದ ದೇಶಾದ್ಯಂತ ಮತ್ತು ದೆಹಲಿ ಗಡಿಗಳ ಸುತ್ತಮುತ್ತ ಕಳೆದ 10 ತಿಂಗಳಿಂದ ದಶ ಲಕ್ಷಾಂತರ ಕುಟುಂಬಗಳು ನಡೆಸುತ್ತಿರುವ ಐತಿಹಾಸಿಕಚಳವಳಿಯೇ ಸಾಕ್ಷಿ ಎಂದು ಹೇಳಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ಒಕ್ಕೂಟ ಸರ್ಕಾರದ ಗೃಹ ಖಾತೆಯರಾಜ್ಯ ಸಚಿವರಾದ ಅಜಯ ಮಿಶ್ರಾ ಅವರನ್ನು ಈಕೂಡಲೇ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ಸಚಿವ ಅಜಯ ಮಿಶ್ರಾ ಹಾಗೂ ಆತನ ಮಗ ಆಶಿಶ್ ಮಿಶ್ರಾ ಮೋನು ಆತನ ಗೂಂಡಾ ಪಡೆಯನ್ನು ತಕ್ಷಣವೇ ಬಂಧಿಸಬೇಕು ಮತ್ತು ಕೊಲೆ ಪಾತಕ ಪ್ರಕರಣವೆಂದು ಮೊಕದ್ದಮೆ ಹೂಡಬೇಕು.
ಈ ಒಟ್ಟುಪ್ರಕರಣವನ್ನು ಸರ್ವೋತ್ಛ ನ್ಯಾಯಾಲಯದ ಸುಪರ್ದಿಯಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಕ್ರಮ ವಹಿಸಬೇಕು. ಹರ್ಯಾಣ ಮುಖ್ಯಮಂತ್ರಿಯನ್ನು, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ಅಗತ್ಯ ಕ್ರಮವಹಿಸಬೇಕು. ಈ ದುಷ್ಕೃತ್ಯದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರನೀಡಬೇಕು ಮತ್ತು ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರನೀಡಬೇಕು ಎನ್ನುವ ಹಕ್ಕೊತ್ತಾಯಗಳನ್ನು ಪ್ರತಿಭಟನೆಯಲ್ಲಿ ಮಂಡಿಸಲಾಯಿತು. ಪ್ರಾಂತ ರೈತ ಸಂಘದ ತಾ.ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್, ತಾಲೂಕುಕನ್ನಡ ಪಕ್ಷದ ಕಾರ್ಯದರ್ಶಿ ಡಿ.ಪಿ.ಆಂಜನೇಯ ಟಿಎಪಿಎಂ ಸಿಎಸ್ ನಿರ್ದೇಶಕ ಲಕ್ಷಿ$¾àನಾರಾಯಣ, ದಲಿತ ಸಂಘಟನೆಯ ರಾಜುಸಣ್ಣಕ್ಕಿ ಉಪಸ್ಥಿತರಿದ್ದರು.