Advertisement
ಕರ್ನಾಟಕ ಮಾದಿಗ ದಂಡೋರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯವರಿಗೆ ಸ್ಪಷ್ಟವಾಗಿ ಗೊತ್ತಿದೆ. ಅವರಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎಂಬುವುದು ಮನಸ್ಸಿನಲ್ಲಿದೆ. ಆದರೆ ಕಾಣದ ಕೈಗಳು ವರದಿ ಜಾರಿ ಮಾಡಲು ಬೀಡುತ್ತಿಲ್ಲ ಎಂದು ಆರೋಪಿಸಿದರು.
Related Articles
Advertisement
ಬೆರಳೆಣಿಕೆಯಷ್ಟು ಇರುವ ಸ್ಪರ್ಶ ಜಾತಿಯ ಕೆಲವರು ಈ ಪರಿಶಿಷ್ಟ ಜಾತಿಗೆ ಬರುವ ಎಲ್ಲಾ ಅನುದಾನ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಬಹು ಸಂಖ್ಯಾತವಾಗಿರುವ ಮಾದಿಗ ಜನಾಂಗ ಹಿಂದುಳಿದಿದೆ ಎಂದರು.
ಬಿಕೆಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ. ಶಿವಪ್ಪ ಮಾತನಾಡಿ, ನಾಮಕಾವಸ್ಥೆಗೆ ಆದಿಜಾಂಭವ ನಿಗಮ ಸ್ಥಾಪಿಸಿ ಇದುವರೆಗೂ ಅಧ್ಯಕ್ಷ, ನಿರ್ದೇಶಕರನ್ನು ನೇಮಿಸಿಲ್ಲ. ಹಾಗೂ ಅನುದಾನ ಬಿಡುಗಡೆಗೊಳಿಸಿ ಎಂದು ಹೇಳಿದರು. ಈ ವೇಳೆ ಆದಿ ಜಾಂಭವ ಸೇವಾ ಟ್ರಸ್ಟ್ ಕೃಷ್ಣಮೂರ್ತಿ, ಅರುಂಧತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಮಾತಂಗಾ ಮಹರ್ಷಿ ಸೇವಾ ಟ್ರಸ್ಟ್ ಪದಾಧಿಕಾರಿಗಳು, ದಲಿತ ಸ್ವಾಭಿಮಾನಿ ಸಮಿತಿ ಪದಾಧಿಕಾರಿಗಳು, ಕರ್ನಾಟಕ ದಲಿತ ಜನಸೇನೆ ಪದಾಧಿಕಾರಿಗಳು, ಸಫಾಯಿ ಕರ್ಮಚಾರಿಕಾವಲುಸಮಿತಿಸಂಚಾಲಕ ಮ್ಯಾಥ್ಯು ಮುನಿಯಪ್ಪ ಇದ್ದರು.