Advertisement
ವಿದ್ಯಾನಗರ ರಸ್ತೆಯ ಬಳಿಯ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್- 82 ಕಾರ್ಯಕ್ರಮದ ಸ್ಥಳದಿಂದ ಮೆರವಣಿಗೆಆರಂಭಿಸಿದ ನೂರಾರು ಪ್ರತಿನಿಧಿಗಳು ಗುಂಡಿ ವೃತ್ತ, ವಿದ್ಯಾರ್ಥಿ ಭವನ, ಅಂಭೇಡ್ಕರ್ ವೃತ್ತದ ಮೂಲಕ ಜಯದೇವ ವೃತ್ತ ತಲುಪಿದರು.
Related Articles
Advertisement
ಸಿಪಿಐ ಮುಖಂಡರಾದ ಡಾ| ಸಿದ್ಧನಗೌಡ ಪಾಟೀಲ್, ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಇದೊಂದು ಅತ್ಯಂತ ಹೇಯ ಕೃತ್ಯ, ಅಭಿವ್ಯಕ್ತಿ ಸ್ವಾತಂತ್ರ ಹರಣಮಾಡುವ ಯತ್ನ. ಇಂತಹ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದರು. ಕೋಮು ಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್ ಮಾತನಾಡಿ, ನಾವು ಗೂಂಡಾ ಸಂಸ್ಕೃತಿಯಿಂದ ಬಂದವರಲ್ಲ.
ನಾವು ಕಾನೂನು ನಂಬಿ ಜೀವನ ನಡೆಸುವವರು. ಯೋಗೀಸ್ ಮಾಸ್ಟರ್ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಸಹ ದಾವಣಗೆರೆಯ ಕಾರ್ಯಕ್ರಮಕ್ಕೆ ಬಂದಾಗ ಅವರ ಮೇಲೆ ಹಲ್ಲೆಮಾಡಲು ಮುಂದಾಗಿದ್ದರು. ಆಗ ನಮ್ಮ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು.
ಇದು ಗೊತ್ತಿದ್ದು ಪೊಲೀಸರು ಸೂಕ್ತ ಭದ್ರತೆ ಒದಗಿಸದಿರುವುದು ಬೇಸರದ ಸಂಗತಿ ಎಂದರು. ಆಮ್ ಆದ್ಮಿ ಪಕ್ಷದ ಕೆ. ರಾಘವೇಂದ್ರ, ನಗರಪಾಲಿಕೆ ಸದಸ್ಯ ಎಚ್.ಜಿ. ಉಮೇಶ್, ರೈತ ಸಂಘದ ಬಲ್ಲೂರು ರವಿಕುಮಾರ್, ಆವರಗೆರೆ ರುದ್ರಮುನಿ, ಅರುಣಕುಮಾರ್ ಕುರುಡಿ, ಮಾನವ ಬಂಧುತ್ವ ವೇದಿಕೆಯ ರಾಘು ದೊಡ್ಮನಿ,
ಸಿಪಿಐ ಎಂನ ಕೆ.ಎಲ್. ಭಟ್, ವಕೀಲ ಅನೀಸ್ ಪಾಷ, ಮುಖಂಡರಾದ ಐರಣಿ ಚಂದ್ರು, ಟಿ.ವಿ. ರೇಣುಕಮ್ಮ, ಉಷಾರಾಣಿ, ಹೆಗ್ಗೆರೆ ರಂಗಪ್ಪ, ಇ. ಶ್ರೀನಿವಾಸ್, ಕೆ. ಮಹಾಂತೇಶ್, ಕೋಳಿ ಇಬ್ರಾಹಿಂ, ಟಿ. ಅಜರ್, ಮಲ್ಲಿಗೆ ಸೇರಿದಂತೆ ವಿವಿಧ ಪ್ರಗತಿ ಪರ, ದಲಿತ ಪರ, ರೈಪರ ಸಂಘಟನೆ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.