Advertisement

ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

05:04 PM Aug 07, 2022 | Team Udayavani |

ಯಾದಗಿರಿ: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೊಳಿಸಲು ಆಗ್ರಹಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಮುಖಂಡರು ನಗರದ ಸುಭಾಷ್‌ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.

Advertisement

ಮಾದಿಗ ದಂಡೋರಾ ರಾಜ್ಯಾಧ್ಯಕ್ಷ ಬಿ. ನರಸಪ್ಪ, ನ್ಯಾ| ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶೀಘ್ರ ವರದಿ ಯಥಾವತ್ತಾಗಿ ಜಾರಿಗೊಳಿಸದಿದ್ದರೆ ನಮ್ಮ ಕಾಲೋನಿಗಳಲ್ಲಿ ನಿಮ್ಮನ್ನು ಬಿಟ್ಟುಕೊಳ್ಳುವುದಿಲ್ಲ. ಜೊತೆಗೆ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಎಂದು ಎಚ್ಚರಿಸಿದರು.

ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ, ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಸಮಾಜದ ಹಿರಿಯ ಮುಖಂಡ ಮಲ್ಲಣ್ಣ ದಾಸನಕೇರಿ ಮಾತನಾಡಿದರು.

ಸಮಾಜದ ಮುಖಂಡರಾದ ಶಿವಲಿಂಗಪ್ಪ ಪುಟಗಿ, ಗೋಪಾಲ ದಾಸನಕೇರಿ, ಹಣಮಂತ ಲಿಂಗೇರಿ, ಭೀಮಾಶಂಕರ ಬಿಲ್ಲವ, ಮಲ್ಲಿಕಾರ್ಜುನ ಬಬಲಾದ, ಚಂದ್ರಶೇಖರ ಮುಂಡರಿಗಿ, ದೇವಿಂದ್ರಪ್ಪ ಲಿಂಗೇರಿ, ಮಲ್ಲು ಬೇಳಗೇರಾ, ಸಾಮುವೇಲ್‌ ಕಣೆಕಲ್‌, ಭೀಮರಾಯ ಕಂದಕೂರ, ರಾಜು ಹೊಸಳ್ಳಿ, ಮಲ್ಲಿಕಾರ್ಜುನ ಸುಕ್ಕಪನೋರ, ಅನಿಲ ಕುಮಾರ ದಾಸನಕೇರಿ, ಸೋಮಶೇಖರ, ಭೀಮಣ್ಣ ಕಕ್ಕೇರಾ, ಹಣಮಂತ ಗೊಂದೆನೂರ, ನಿಂಗಪ್ಪ ಹಾಲಗೇರಾ, ಮಲ್ಲಪ್ಪ ಹೆಗ್ಗಣಗೇರಾ, ಮರೆಪ್ಪ ವಡಿಗೇರಾ, ಈರಣ್ಣ ವಡಿಗೇರಾ, ಯೇಸು ಕಿಲ್ಲಣಕೇರಾ, ಹುಲಗಪ್ಪ ಗೊಂದೆನೂರ, ವಿಲ್‌ಸನ್‌ ಹಾಲಗೇರಾ, ನಾಗಪ್ಪ ನೀಲಹಳ್ಳಿ, ಶರಣಪ್ಪ ವಡಿಗೇರಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next