ಬೆಂಗಳೂರು: ಕೆಲಸ ಕಾಯಂಗೊಳಿ ಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ನೂರಾರು ಪೌರಕಾರ್ಮಿಕರು ಬುಧವಾರ ನಗರದ ಮೆಯೋ ಹಾಲ್ ಎದುರು ಪ್ರತಿಭಟನೆ ನಡೆಸಿದರು.
ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ಸಹಾಯಕರು ಸೇರಿದಂತೆ ಎಲ್ಲ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು, ಕನಿಷ್ಠ ವೇತನವನ್ನು 35 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಬೇಡಿಕೆಗಳಿಗೆ ಪೂರಕ ಸ್ಪಂದನೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:- ಜೋರಾಯ್ತು ರಿಲೀಸ್ ಸಿನಿಮಾ ಧಮಾಕ: ನವೆಂಬರ್ ತಿಂಗಳಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ
ಸಮಾಜದ ಬಹುಮುಖ್ಯ ಸೇವೆ ಯನ್ನು ಪೌರಕಾರ್ಮಿಕರು ಸಲ್ಲಿಸುತ್ತಿ ದ್ದಾರೆ. ಆದರೆ, ಅವರಿಗೆ ಕನಿಷ್ಠ ಕುಡಿ ಯುವ ನೀರು, ಶೌಚಾಲಯ, ಸುರಕ್ಷತಾ ಸಲಕರಣೆ ಮತ್ತಿತರ ಕನಿಷ್ಠ ಸೌಲಭ್ಯ ಗಳನ್ನೂ ಒದಗಿಸುವಲ್ಲಿ ಬಿಬಿಎಂಪಿ ವಿಫಲ ವಾಗಿದೆ. ಕೋವಿಡ್‌ಗೆ ಬಲಿಯಾದ ಪೌರಕಾರ್ಮಿಕರ ಕುಟುಂಬಗಳಿಗೆ ಪರಿ ಹಾರವನ್ನೂ ಒದಗಿಸಿಲ್ಲ. ಈ ಮಧ್ಯೆ ತಮ್ಮನ್ನು ಅತ್ಯಂತ ಕೀಳಾಗಿ ಕಾಣುವ ಘಟನೆಗಳು ಕೂಡ ಆಗಾಗ್ಗೆ ವರದಿಯಾಗು ತಿವೆ ಎಂದು ಆರೋಪಿಸಿದರು.
ಬಿಬಿಎಂಪಿ ಪೌರಕಾರ್ಮಿಕರ ಸಂಘ ದಿಂದ ಅ.9ರಿಂದ ಶುರುವಾದ ಪೌರ ಕಾರ್ಮಿಕರ ಜಾಥಾವು ಇದುವರೆಗೆ ಮಹ ದೇವಪುರ, ಆರ್.ಆರ್. ನಗರದಲ್ಲಿ ನಡೆ ದಿದೆ. ಬುಧವಾರ ಪೂರ್ವ ವಲಯದಲ್ಲಿ ನಡೆಯಿತು. ಪದಾಧಿಕಾರಿಗಳಾದ ನಿರ್ಮಲಾ, ಮೈತ್ರೇಯಿ ಇದ್ದರು.