Advertisement
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವವಹಿಸಿದ್ದ ಪುರಸಭಾ ಸದಸ್ಯ ಪ್ರಜ್ವಲ್ ಗೌಡ ಮಾತನಾಡಿ, ಪಟ್ಟಣದ ಮುಖ್ಯರಸ್ತೆ ಅಗಲೀಕರಣವಾಗದೆ ಸಾರ್ವಜನಿಕರಿಗೆ ಬಹಳ ತೊಂದರೆ ಯುಂಟಾಗಿದೆ. ಅರ್ಧಂಬರ್ಧ ಕಟ್ಟಡ ಗಳನ್ನು ತೆರವುಗೊಳಿಸಿರುವುದರಿಂದ ಪಟ್ಟಣದ ವ್ಯಾಪಾರ ವ್ಯವಹಾರಗಳಲ್ಲಿ ಇಳಿಮುಖವಾಗಿದೆ. ಬೇಲೂರು, ಹಾಸನ, ಹಳೇಬೀಡು, ಚನ್ನರಾಯಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಸ್ತೆ ಅಗಲೀಕರಣ ಮಾಡಲಾಗಿದೆ. ಆದರೆ ಸಕಲೇಶಪುರ ಪಟ್ಟಣದಲ್ಲಿ ಮಾತ್ರ ರಸ್ತೆ ಅಗಲೀಕರಣ ಕಾಮಗಾರಿ ಅರ್ಧಕ್ಕೆ ನಿಲ್ಲಲು ಕಾರಣವೇನು? ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಮುಖ್ಯ ರಸ್ತೆ ಮುಖಾಂತರ ಹಾದು ಹೋಗಿರುವುದ ರಿಂದ ದಿನಿನಿತ್ಯ 20 ಸಾವಿರಕ್ಕೂ ಹೆಚ್ಚು ವಾಹನಗಳು ತಿರುಗಾಡುತ್ತಿದ್ದು ಇದರಿಂದ ಸರಾಗ ವಾಹನ ಸಂಚಾರಕ್ಕೆ ಅಡಚಣೆ ಯುಂಟಾಗಿದೆ. ಹಲವು ಅಪಘಾತಗಳು ಸಂಭವಿಸಿ ಸಾವು ನೋವುಗಳು ಉಂಟಾಗಿದೆ. ಉಪವಿಭಾಗಾಧಿಕಾರಿಗಳು ರಸ್ತೆ ಅಗಲೀಕರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಸಿದರೂ ಸಹ ಅವರಿಗೆ ಕೆಲವು ವರ್ತಕರಿಂದ ಬೆಂಬಲ ದೊರಕಿಲ್ಲ.
Advertisement
ರಸ್ತೆ ಅಗಲಿಕರಣಕ್ಕೆ ಆಗ್ರಹಿಸಿ ಪ್ರತಿಭಟನೆ
03:32 PM Dec 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.