Advertisement

ನಾಳೆ ಪರಿವರ್ತನಾ ಸಂಘದಿಂದ ಪ್ರತಿಭಟನೆ

04:40 PM Feb 15, 2021 | Team Udayavani |

ಚಾಮರಾಜನಗರ: ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ, ಕೃಷಿ ಹಾಗೂ ಗೋಹತ್ಯಾ ಕಾಯಿದೆಗಳ ರದ್ದು, ತೈಲ ಮತ್ತು ಸಿಲಿಂಡರ್‌ ಬೆಲೆ ಇಳಿಕೆ, ಬಡ ನಿರುದ್ಯೋಗಿ ಪದವೀಧರರಿಗೆ ಕೃಷಿ ಭೂಮಿ ಹಂಚುವಂತೆ ಒತ್ತಾಯಿಸಿ ಭಾರತೀಯ ಪರಿವರ್ತನಾ ಸಂಘದ ವತಿಯಿಂದ ಫೆ.16 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆಲೂರುಮಲ್ಲು ಹೇಳಿದರು.

Advertisement

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡು ಬೆಳಗ್ಗೆ 11ಗಂಟೆಗೆಅಲ್ಲಿಂದ ಮೆರವಣಿಗೆ ಹೊರಟು ಡಿವಿಯೇಷನ್‌ ರಸ್ತೆ, ಭುವನೇಶ್ವರರಿ  ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಬೃಹತ್‌ ಧರಣಿ ನಡೆಸಲಾಗುವುದು ಎಂದರು. ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಹೆಚ್ಚಿಸಿರುವ ಬಸ್‌ದರವನ್ನು ವಾಪಸ್‌ನಾಳೆ ಪರಿವರ್ತನಾ ಸಂಘದಿಂದ ಪ್ರತಿಭಟನೆ ಪಡೆಯಬೇಕು ಎಂದರು.

ನಗರಸಭಾಸದಸ್ಯ ಪ್ರಕಾಶ್‌, ಸಂಘದ ಪ್ರಧಾನಕಾರ್ಯದರ್ಶಿ ವಾಸು, ತಾಲೂಕು ಅಧ್ಯಕ್ಷಚಿನ್ನಸ್ವಾಮಿ ರಾಮಸಮುದ್ರ, ಹೊನ್ನಹಳ್ಳಿ ಬಸವಣ್ಣ ಗೋಷ್ಠಿಯಲ್ಲಿ ಹಾಜರಿದ್ದರು.

ಅಕ್ರಮ ಪಡಿತರ ವಶ, ವ್ಯಕ್ತಿ ಸೆರೆ :

ಕೊಳ್ಳೇಗಾಲ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಶೇಖರಣೆ ಮಾಡಿ, ಮಾರುತಿ ವ್ಯಾನ್‌ ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

Advertisement

ಪಟ್ಟಣದ ಗೀತಾ ಪ್ರೈ ಮರಿ ಶಾಲೆಯ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ವ್ಯಾನ್‌ ತಡೆದು ಪರಿಶೀಲಿಸಿದಾಗಪತ್ತೆಯಾದ ಅಕ್ರಮ ಪಡಿತರ ಅಕ್ಕಿಯನ್ನು ವಶ ಪಡಿಸಿಕೊಂಡು, ಹನೂರು ತಾಲೂಕಿನ ಕೌದಳ್ಳಿಯ ಆದಿಲ್‌ ಪಾಷ ಎಂಬಾತ ನನ್ನು ಬಂಧಿಸಿದ್ದಾರೆ. ಈ ಪಡಿತರ ಅಕ್ಕಿ ತನ್ವಿರ್‌ ಸದ್ದಾಂ ಅವರಿಗೆ ಸೇರಿದ್ದಾಗಿದೆ ಎಂದು ಆರೋಪಿ ತಿಳಿಸಿದ್ದಾನೆ. 367 ಕೆ.ಜಿ. ಪಡಿ ತರಅಕ್ಕಿ ಮತ್ತು ಮಾರುತಿ ವ್ಯಾನ್‌ ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next