Advertisement
ನಗರದ ವಿವಿಧೆಡೆಯಿಂದ ಆಗಮಿಸಿದ ವಸತಿ ರಹಿತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಾವೇಶಗೊಂಡು ವಸತಿ ನೀಡ ಬೇಕೆಂದುಜಿಲ್ಲಾಡಳಿತವನ್ನುಒತ್ತಾಯಿಸಿದರು. ನಗರ ವ್ಯಾಪ್ತಿಯಲ್ಲಿ ಕೂಲಿ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ವಿವಿಧ ಸಮುದಾಯದ281ಕುಟುಂಬಗಳಿಗೆ ತುರ್ತಾಗಿ ಸರ್ಕಾರಿ ಭೂಮಿ ಗುರುತಿಸಿ ಮಂಜೂರು ಮಾಡಲು ಒತ್ತಾಯಿಸಿದರು.
Related Articles
Advertisement
ಕೋವಿಡ್ ನ ಈ ಸಂಕಷ್ಟದಲ್ಲಿ ಬಾಡಿಗೆ ಮನೆಗಳಲ್ಲಿರುವ ಕುಟುಂಬಗಳಿಗೆ ಮಾಲೀಕರು ಕಿರುಕುಳ ನೀಡಬಾರದು ಇಂತಹ ದೂರುಗಳಿದ್ದಲ್ಲಿ ಖುದ್ದು ಭೇಟಿ ಮಾಡುವಂತೆ ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಹೊಂಬಯ್ಯನ ಪಾಳ್ಯದ ಶ್ವೇತಾ ಶಿರಾ ಗೇಟ್ ನಲ್ಲಿ40 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿ ದುಡಿಮೆಯಿಲ್ಲದೇ ನನ್ನ ಮಾಂಗಲ್ಯ ಮಾರಿ ಬಾಡಿಗೆ ಹಣ ಕಟ್ಟಿದ್ದೇನೆ ಎಂದು ಅಳಲು ತೋಡಿಕೊಂಡರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸ್ಲಂ ಜನಾಂದೋಲನಾ ಸಂಚಾಲಕರ ಎ,ನರಸಿಂಹ ಮೂರ್ತಿ ಮಾತನಾಡಿ ಕಳೆದ 20 ವರ್ಷ ಗಳಿಂದ ರಾಜ್ಯದಲ್ಲಿ ನಿವೇಶನ ನೀಡುವ ಪ್ರಕ್ರಿಯೆ ನಗರಪ್ರದೇಶಗಳಲ್ಲಿ ಸ್ಥಬ್ದಗೊಂಡಿದೆ, ದುರ್ಬಲ ವರ್ಗಗಳಿಗೆ ಮತ್ತು ನಗರ ಪ್ರದೇಶದಲ್ಲಿರುವ ನಿವೇಶನ ರಹಿತರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಕಲಂ 18ಎ ರಡಿಯಲ್ಲಿ ಸರ್ಕಾರಿ ಭೂಮಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಅದರಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಗಳ ವಿವರವನ್ನು ಫ.5 ರಂದು ಸ್ಲಂ ಜನರಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದು ತಕ್ಷಣಕ್ಕೆ 281 ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಬೇಕು ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದಶಂಕರಯ್ಯ , ಮೊಹಮ್ಮದ್ ಹಯತ್, ತಿರು ಮಲಯ್ಯ, ರಂಗನಾಥ್,ಮೋಹನ್, ಶಾರ ದಮ್ಮ, ಗಂಗಮ್ಮ, ಪುಟ್ಟರಾಜು ಹಾಗೂ ನಮ್ಮ ಮನೆ ಹೋರಾಟ ಸಮಿತಿಯ ಮಂಗಳಮ್ಮ, ಚಂದ್ರಿಕಾ,ಹನುಮಕ್ಕ, ಸುನಂದಮ್ಮ, ಗೋಪಾಲಯ್ಯ ಸೇರಿದಂತೆ ವಸತಿ ರಹಿತರಿದ್ದರು.