ಮೈಸೂರು: ದೇಶದಲ್ಲಿ ಬಿಜೆಪಿ ಆಡಳಿತ ಬಂದ ಮೇಲೆ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ರೈತ ವಿರೋಧಿ ಆಡಳಿತ ಹೆಚ್ಚಾಗುತ್ತಿದ್ದು, ಗಾಂಧೀಜಿಯವರ ಆದರ್ಶ ತತ್ವಗಳನ್ನು ನಾಶ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್ .ಸಿ.ಮಹದೇವಪ್ಪಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಸರಳ ವಾಗಿ ಆಚರಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಸಾನ್-ಮಜ್ದೂರ್ ಬಚಾವೋ ದಿವಸ್ ಆಚರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆಮಾಜಿಸಚಿವಎಚ್.ಸಿ.ಮಹದೇವಪ್ಪ ಮಾತನಾಡಿ, ಹೆಣ್ಣುಮಗಳು ಮಧ್ಯರಾತ್ರಿಯಲ್ಲಿ ಒಬ್ಬಳೇ ಹೋದರೂ ಅವಳಿಗೆ ಯಾವ ದೌರ್ಜನ್ಯ ಆಗಬಾರದು ಎಂದು ಗಾಂಧಿ ಬಯಸಿದ್ದರು. ಆದರೆ, ಇಂದು ಉತ್ತರ ಪ್ರದೇಶದಲ್ಲಿ ಹಗಲಲ್ಲೇ ದಲಿತಹೆಣ್ಣುಮಗಳ ಮೇಲೆಅತ್ಯಾಚಾರ ನಡೆದಿದೆ. ಅಲ್ಲಿ ಬೀದಿಯಲ್ಲಿ ಓಡಾಡಲು ಹೆಣ್ಣು ಮಕ್ಕಳು ಭಯಪಡುವ ವಾತಾವರಣ ಸೃಷ್ಟಿಯಾಗಿದೆ ಈ ಮೂಲಕ ಗಾಂಧಿ ಆದರ್ಶಗಳನ್ನು ಬಿಜೆಪಿ ಸರ್ಕಾರಗಳು ಧೂಳಿಪಟ ಮಾಡುತ್ತಿವೆ ಎಂದರು.
ಬಿಜೆಪಿ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕನ್ನು ಕಿತ್ತಿಕೊಳ್ಳುತ್ತಿದೆ, ಹೋರಾಟ ಹತ್ತಿಕ್ಕುವ ಕೆಲಸಮಾಡುತ್ತಿದೆ. ಸರ್ಕಾರದ ವಿರುದ್ಧ ಯಾರೇ ಪ್ರತಿಭಟಿಸಿದರೂ ಅವರ ವಿರುದ್ಧವೇ ಎಫ್ಐಆರ್‌ಹಾಕಲಾಗುತ್ತಿದೆ, ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಹೋದರೆ, ಅವರ ಕೊರಳ ಪಟ್ಟಿಗೆ ಪೊಲೀಸರು ಕೈ ಹಾಕಿ ತಳ್ಳುತ್ತಾರೆ ಎಂದರೆ ನಾವು ಯಾವ ದೇಶದಲ್ಲಿದ್ದೇವೆ? ಇದೇನುಪ್ರಜಾಪ್ರಭುತ್ವವೋ ಅಥವಾ ಗೂಂಡಾರಾಜ್ಯವೋ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದರು.
ಶಾಸಕ ಯತೀಂದ್ರ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರಿಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ. ಜೊತೆಗೆ ಯುವತಿಯ ಶವಸಂಸ್ಕಾರವನ್ನು ರಾತ್ರೋರಾತ್ರಿ ಪೊಲೀಸರೇ ಮಾಡಿದ್ದಾರೆ. ಸಾಕ್ಷಿಯನ್ನು ನಾಶಪಡಿಸಲು ಪೊಲೀಸರೇ ಸಹಕರಿಸಿದ್ದಾರೆ ಎಂದು ದೂರಿದರು.
ಈ ವೇಳೆ ಶಾಸಕ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾರ ವಾಸು, ಎಂ.ಕೆ.ಸೋಮಶೇಖರ್, ಗ್ರಾಮಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ ಇನಿತರರಿದ್ದರು.