Advertisement

ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಬಸವರಾಜಪ್ಪ ಬಣದಿಂದ ಪ್ರತಿಭಟನೆ

05:24 PM Nov 03, 2022 | Team Udayavani |

ದಾವಣಗೆರೆ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ರೈತ ಸಂಘ ಹೆಚ್.ಆರ್ ಬಸವರಾಜಪ್ಪ ಬಣದ ಕೆಲ ರೈತರು ಕೈಗೆ ಕಪ್ಪುಪಟ್ಟಿ ಧರಿಸಿ, ಧಿಕ್ಕಾರ ಕೂಗಿದ ಘಟನೆ ಗುರುವಾರ ನಗರದ ಎಪಿಎಂಸಿ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎರಡೂ ಬಣದ ರೈತರ ನಡುವೆ ತೀವ್ರ ವಾಗ್ವಾದ ನಡೆದು, ಪರಿಸ್ಥಿತಿ ತಾರಕಕ್ಕೇರುವ ಹಂತ ತಲುಪುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Advertisement

ರೈತ ಸಂಘದ ರಾಜ್ಯ ಸಮಿತಿ ಸಭೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೋಡಿಹಳ್ಳಿ ಚಂದ್ರಶೇಖರ್ ನಗರಕ್ಕೆ ಆಗಮಿಸಿದ್ದಾರೆಂಬ ಸುದ್ದಿ ತಿಳಿದ ರೈತ ಸಂಘದ (ಹೆಚ್.ಆರ್. ಬಸವರಾಜಪ್ಪ ಬಣ) ಕೆಲ ರೈತ ಸದಸ್ಯರು, ಎಪಿಎಂಸಿ ಆವರಣಕ್ಕೆ ಬಂದು, ಕೋಡಿಹಳ್ಳಿಯವರು ರೈತರ ಹಣ ಲೂಟಿ ಹೊಡಿದಿದ್ದಾರೆ. ರೈತ ಸಂಘದ ಹೆಸರಿಗೆ ಕಪ್ಪುಮಸಿ ಬಳಿದಿದ್ದಾರೆ ಎಂದು ಆರೋಪಿಸಿ, ಕೋಡಿಹಳ್ಳಿ ವಿರುದ್ಧ ಘೋಷಣೆ ಕೂಗಿ, ಧಿಕ್ಕಾರ ಹಾಕಿದರು.

ತಮ್ಮ ಮುಖಂಡರ ವಿರುದ್ಧ ಧಿಕ್ಕಾರ ಕೂಗುತ್ತಿರುವುದನ್ನು ತಡೆಯಲು ಎಪಿಎಂಸಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆ ಬಿಟ್ಟು ಬಂದ ಕೋಡಿಹಳ್ಳಿ ಬಣದ ಕೆಲ ರೈತರು, ಧಿಕ್ಕಾರ ಕೂಗುತ್ತಿದ್ದವರೊಂದಿಗೆ ವಾಗ್ವಾದಕ್ಕಿಳಿದರು. ಎರಡೂ ಬಣದ ರೈತರ ನಡುವೆ ಪರಸ್ಪರ ಆರೋಪ, ಪ್ರತ್ಯಾರೋಪದ ವಾಗ್ವಾದ ಅತಿರೇಕಕ್ಕೆ ತಲುಪಿ, ಕೈಕೈಮಿಲಾಯಿಸುವ ಹಂತ ತಲುಪುತ್ತಿದ್ದಂತೆ ಜಾಗ್ರತರಾದ ಪೊಲೀಸರು ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next