ಪಡೆದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೊಸ ಆಸ್ಪತ್ರೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ನಗರದಲ್ಲಿನ ರಸ್ತೆಗಳ ದುರಸ್ತಿ ಮುಗಿದಿಲ್ಲ. ಒಳಚರಂಡಿ ಯೋಜನೆ ಅರ್ಧಕ್ಕೆ ನಿಂತಿದೆ. ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು
ಪ್ರಚಾರ ಪಡೆಯುವ ಏಕೈಕ ಉದ್ದೇಶದಿಂದ ಸಿಎಂ ಕರೆಸಿ ಚಾಲನೆ ಕೊಡಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಗರದಲ್ಲಿನ ನಿರಂತರ ನೀರು ಪೂರೈಕೆ ಯೋಜನೆ ಅಪೂರ್ಣವಾಗಿದೆ. ಒಳಚರಂಡಿಯ ಯಾವುದೇ ಒಂದು ಲೈನ್ ಸಹ ಪೂರ್ಣಗೊಂಡಿಲ್ಲ. ಮನೆ ಸಂಪರ್ಕ
ಸೇರಿದಂತೆ ಪ್ರಮುಖ ಕೆಲಸಗಳು ಬಾಕಿ ಉಳಿದಿವೆ. ಇದೊಂದು ರಾಜಕೀಯ ಗಿಮಿಕ್ ಎಂದು ಟೀಕಿಸಿದ ಮುಖಂಡರು, ಸಿಎಂ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂ. ಖಜಾನೆಯ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಹಾಳಾಗಿರುವ ರಸ್ತೆಗಳು ಕೂಡಲೇ ದುರಸ್ತಿಗೊಳ್ಳಬೇಕು. ಒಳಚರಂಡಿ ಮತ್ತು ನೀರಿನ ವ್ಯವಸ್ಥೆ ಗುಣಮಟ್ಟದಿಂದ ಪೂರ್ತಿಗೊಳಿಸಲು ಸೂಚಿಸಬೇಕು. ಕೆರೆ ಒಡೆದು ಭೂಮಿ ಕಳೆದುಕೊಂಡ ಜಿಲ್ಲೆಯ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಬೆಳೆ ವಿಮೆಯಿಂದ ವಂಚಿತರಾಗಿರುವ ರೈತರಿಗೆ 15 ದಿನದೊಳಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಬೀದರನ್ನು
ಬರಪಿಡಿತ ಜಿಲ್ಲೆ ಎಂದು ಘೋಷಿಸಿ ಕನಿಷ್ಠ 500 ಕೋಟಿ ರೂ. ವಿಷೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಸುರೇಶ ಮಾಶೆಟ್ಟಿ ಮತ್ತು ತೊಗರಿ ಬೆಳೆಗಾರ ಪ್ರಕೋಷ್ಠದ ಅಧ್ಯಕ್ಷ ಕುಶಾಲರಾವ್ ಯಾಬಾ ಇದ್ದರು.
Advertisement
ಟೀಕಿಸುವುದು ಹುಡುಗಾಟ ಆಗಿದೆ ವಿರೋಧ ಪಕ್ಷ ಬಿಜೆಪಿಯವರಿಗೆ ಟೀಕೆ ಮಾಡುವುದು ಹುಡುಗಾಟ ಆಗಿದೆ. ಅವರಂತೂ ಅಭಿವೃದ್ಧಿಕೆಲಸ ಮಾಡುವುದಿಲ್ಲ, ಅಪೂರ್ಣ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗಿದೆ.
ನೂತನ ಆಸ್ಪತ್ರೆಯ ಎಲ್ಲ ಕೆಲಸ ಮುಗಿದಿದ್ದು, ನಾಳೆಯಿಂದಲೇ ಸೇವೆ ನೀಡಲಿದೆ. ನಿರಂತರ ನೀರು, ಒಳಚರಂಡಿ ಕಾಮಗಾರಿ
ಸಹ ಮುಗಿದೆ. ನನೆಗುದಿಗೆ ಬಿದ್ದಿದ್ದ ಜಿಲ್ಲಾ ಆಡಳಿತ ಸಂಕೀರ್ಣಕ್ಕೆ ಜಾಗ ಗುರುತಿಸಿ 48 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ
ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ.