Advertisement

ರೈತರ ಧರಣಿ ಅಂತ್ಯ: ಇನ್ನು ಗ್ರಾಮೀಣದಲ್ಲಿ ಜಾಥಾ

06:57 PM Jan 01, 2021 | Team Udayavani |

ಕಲಬುರಗಿ: ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನುಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಜಗತ್‌ ವೃತ್ತದಲ್ಲಿ 17 ದಿನಗಳಿಂದ ನಡೆಯುತ್ತಿದ್ದರೈತರ ಹಕ್ಕೊತ್ತಾಯಗಳಿಗಾಗಿ ಧರಣಿಯನ್ನು ಗುರುವಾರಕ್ಕೆ ಅಂತ್ಯ ಮಾಡಲಾಯಿತು.

Advertisement

ಇನ್ಮುಂದೆ ಕಾಯ್ದೆಗಳ ಅಪಾಯದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲುಗ್ರಾಮಾಂತರ ಪ್ರದೇಶದಲ್ಲಿ ಜಾಥಾ ನಡೆಸಲು ತೀರ್ಮಾನಿಸಲಾಗಿದೆ.ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರು ಸಂಘಟನೆ, ಜನವಾದಿ ಮಹಿಳಾ ಸಂಘಟನೆಗಳನೇತೃತ್ವದಲ್ಲಿ ಧರಣಿ ಆರಂಭಿಸಲಾಗಿತ್ತು. ಮೊದಲನೆ ಹಂತದ ಹೋರಾಟವನ್ನುಪಾದಯಾತ್ರೆ, ಮೆರವಣಿಗೆ ಮತ್ತ ಬಹಿರಂಗಸಭೆ ನಡೆಸಿ, ಕೇಂದ್ರ ಸರ್ಕಾರದ ರೈತ ವಿರೋಧಿ  ಕರಾಳ ಕಾಯ್ದೆಗಳು, ವಿದ್ಯುತ್‌ ಮಸೂದೆ ಹಾಗೂ ರಾಜ್ಯ ಸರ್ಕಾರದ ಭೂಸುಧಾರಣಾತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಸುಗ್ರೀವಾಜ್ಞೆ ಪ್ರತಿಗಳನ್ನು ದಹಿಸಲಾಯಿತು.

ಇದಕ್ಕೂ ಮುನ್ನ ಸಾತ್‌ ಗುಂಬಜ್‌ ವೃತ್ತದ ನ್ಯಾಷನಲ್‌ ಕಾಲೇಜಿನಿಂದ ಸರಾಫ್‌ ಬಜಾರತರಕಾರಿ ಮಾರುಕಟ್ಟೆ, ಸೂಪರ್‌ ಮಾರ್ಕೆಟ್‌ ಮೂಲಕ ಜಗತ್‌ ವೃತ್ತದಲ್ಲಿ ಪಾದಯಾತ್ರೆ ನಡೆಸಿದ ರೈತ ಮುಖಂಡರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಕೃಷಿ ಮತ್ತು ಎಪಿಎಂಸಿ ವಲಯ ನಾಶವಾಗುವಂತೆ ಕಾಯ್ದೆಗಳ ಬಗ್ಗೆ ರೈತರುಈಗಲೇ ಎಚ್ಚರಗೊಳ್ಳಬೇಕು. ಇಂತಹ ಕಾಯ್ದೆಗಳನ್ನು ವಾಪಸ್‌ ಪಡೆಯುವರೆಗೂಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ರೈತ ಮುಖಂಡರು, ಚಿತಂಕರಾದ ಎಂ.ಬಿ. ಸಜ್ಜನ್‌, ಆರ್‌.ಕೆ. ಹುಡಗಿ, ಕಾಶಿನಾಥಅಂಬಲಗಿ, ಭೀಮಶೆಟ್ಟಿ ಯಂಪಳ್ಳಿ, ಕೆ.ನೀಲಾ,ಶರಣಬಸವ ಮಮಶೆಟ್ಟಿ, ದತ್ತಾತ್ರೇಯ ಇಕ್ಕಳಕಿ,ಅಲ್ತಾಫ್‌ ಇನಾಮದಾರ್‌, ಮೇಘರಾಜ್‌ ಕಠಾರೆ, ಮೌಲಾ ಮುಲ್ಲಾ,ನಂದಾದೇವಿ ಮಂಗೊಂಡಿ, ಅಮೀನಾ ಬೇಗಂ, ಚಂದಪ್ಪಪೂಜಾರಿ, ಶ್ರೀಮಂತ ಬಿರಾದಾರ, ಜಗದೇವಿಹೆಗಡೆ ಮಲ್ಲಮ್ಮ ಕೋಡ್ಲಿ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next