Advertisement

ಸರಕಾರದ ಸೇವೆಗಳಲ್ಲಿ ತಾರತಮ್ಯ : ರಮಾನಾಥ ರೈ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ

01:16 PM Aug 31, 2021 | Team Udayavani |

ಬಂಟ್ವಾಳ : ಬಂಟ್ವಾಳದಲ್ಲಿ ಐಸಿಯು ಬಸ್ಸು ಆರೋಗ್ಯ ಸೇವೆ ಹಾಗೂ ಕಾರ್ಮಿಕ ಕಿಟ್ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ.ರೋಡಿನಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

Advertisement

ಬಿಜೆಪಿ ಶಾಸಕರು ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸದೆ ತಾರತಮ್ಯ ಮಾಡುತ್ತಿದ್ದು, ಅವರ ವಿರುದ್ಧ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಗೆ ದೂರು ನೀಡಿದ್ದೇವೆ. ಅದಕ್ಕೆ ಸ್ಪಂದನೆ ಸಿಗದೇ ಇದ್ದಲ್ಲಿ ಐಸಿಯು ಬಸ್ಸಿನ ಎದುರು ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ರಮಾನಾಥ ರೈ ಎಚ್ಚರಿಸಿದರು.

ಐಸಿಯು ಬಸ್ಸು ಬಿಜೆಪಿ ಅಧಿಕಾರ ಇರುವ ಪಂಚಾಯತ್ ಗಳಲ್ಲಿ ಅಲ್ಲೇ ಆರೋಗ್ಯ ಸೇವೆ ನೀಡುತ್ತದೆ. ಅಧಿಕಾರ ಇಲ್ಲದ ಕಡೆ ತಮಗೆ ಬೇಕಾದಲ್ಲಿಗೆ ಹೋಗುತ್ತದೆ. ಕಿಟ್ ಗಳನ್ನು ತಮಗೆ ಬೇಕಾದವರು ಕಾರಿನಲ್ಲಿ ಕೊಂಡುಹೋಗಿ ಕೊಡುತ್ತಿದ್ದಾರೆ. 2 ಸಾವಿರ ರೂಪಾಯಿ ಮೌಲ್ಯದ ಕಿಟ್ ನಲ್ಲಿ ಫಲಾನುಭವಿಗಳಿಗೆ ತಲುಪುವಾಗ 600 -700 ರೂ.ಗಳ ವಸ್ತುಗಳು ಮಾತ್ರ ಇರುತ್ತದೆ. ಉಳಿದವು ಎಲ್ಲಿಗೆ ಹೋಗಿದೆ ಎಂಬುದಕ್ಕೆ ಉತ್ತರಿಸಬೇಕಿದೆ.

ಇದನ್ನೂ ಓದಿ :ನಿರ್ದೇಶಕ ಸಂತೋಷ್ ಆನಂದರಾಮ್ ಮನೆಗೆ ಬಂತು ಹೊಸ ಕಾರು

ನಮ್ಮ ಅವಧಿಯಲ್ಲೂ ಸಾಕಷ್ಟು ಸೌಲಭ್ಯಗಳ ವಿತರಣೆಯಾಗಿದ್ದು, ಆದರೆ ಎಲ್ಲೂ ಕೂಡ ರಾಜಕೀಯ ಮಾಡಿಲ್ಲ. ರಾಜಧರ್ಮ ಎಂದು ಹೇಳುವವರ ಪ್ರಕಾರ ರಾಜಕೀಯ ಮಾಡುವುದೇ ರಾಜಧರ್ಮವಾಗಿದೆ.

Advertisement

94 ಸಿ ವಿತರಣೆಯಲ್ಲೂ ರಾಜಕೀಯ ಮಾಡುತ್ತಿದ್ದು, ಇವರ ಶಕ್ತಿಕೇಂದ್ರವರು ಹೇಳಿದವರಿಗೆ ಮಾತ್ರ ಹಕ್ಕುಪತ್ರ ನೀಡಲಾಗುತ್ತಿದೆ. ನಮ್ಮ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ವಿತರಿಸಿದ್ದೇವೆ. ಯಾವ ಶಕ್ತಿಕೇಂದ್ರವೂ ಇರಲಿಲ್ಲ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವೀನಾ ವಿಲ್ಮ ಮೊರಾಸ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next