ಯಾದಗಿರಿ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಯಾದಗಿರಿಯಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ರೈತ ವಿರೋಧಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಎಲ್ಲಾ ಕೃಷಿ ಉತ್ಪನ್ನಗಳಿಗೆ ಡಾ| ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರೈತರು ಎರಡು ತಿಂಗಳಿಗೂ ಮೀರಿ ಪ್ರತಿಭಟನೆ ನಡೆಸುತ್ತಿದ್ದ ಸರ್ಕಾರ ಸ್ಪಂದನೆ ನೀಡುತ್ತಿಲ್ಲ. ರೈತರ ಆದಾಯ ದ್ವಿಗುಣ ಮಾಡುವ ಕಾಯ್ದೆಗಳಿಗೆ ಎಂದು ಹೇಳಿತ್ತಾರೆ ಹೊರತು ಅವುಗಳಿಗೆ ಸಮರ್ಪಕ ವಿವರಣೆ ನೀಡಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ನಮ್ಮ ಸರ್ಕಾರ ಡಕೋಟಾ ಬಸ್ ಅಲ್ಲ ಶರವೇಗದ ಜೆಟ್ ವಿಮಾನ: ಸಚಿವ ಶ್ರೀರಾಮುಲು
ಈ ವೇಳೆ ರಾಮಲಿಂಗಪ್ಪ ಬಿ.ಎನ್. ಹಣಮಂತ ಮಡಿವಾಳ, ಜಮಾಲಸಾಬ, ಹಳೆಪ್ಪ ತಳವಾರ, ಮಲ್ಲಪ್ಪ, ಸಿದ್ದಪ್ಪ ಇದ್ದರು.