Advertisement

ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

05:44 AM Jun 02, 2020 | Team Udayavani |

ಕೆ.ಆರ್‌.ಪೇಟೆ: ಸೆಸ್ಕ್ ಉಪವಿಭಾಗ ಕಚೇರಿ ಮುಂಭಾಗ ನೌಕರರು ಮತ್ತು ಎಂಜಿನಿಯರ್‌ಗಳು ವಿದ್ಯುತ್‌ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಕಪ್ಪುಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ಮಾಡಿದರು. ವಿದ್ಯುತ್‌ ಸೇವಾಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಕಾಯ್ದೆಯನ್ನು ವಿರೋಧಿಸಿ, ಕೈಗೆ ಕಪ್ಪುಪಟ್ಟಿಯನ್ನು ಧರಿಸಿಕೊಂಡು ಸರ್ಕಾರಗಳ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸೆಸ್ಕ್ ವಿಭಾಗದ ಇಇ ನಾಗರಾಜು ಮಾತನಾಡಿ, ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮೂಲಕ ವಿದ್ಯುತ್‌ ಸೇವಾ ಕ್ಷೇತ್ರಕ್ಕೆ ಖಾಸಗೀಕರಣ ಮಾಡಲು ಹುನ್ನಾರ ಮಾಡಿದೆ. ಈಗಾಗಲೇ ವಿದ್ಯುತ್‌ ಉತ್ಪಾದನೆ, ಪ್ರಸರಣವನ್ನು ಖಾಸಗಿ ಮಾಡಿದೆ. ವಿತರಣೆಗೆ ಅವಕಾಶ ಮಾಡಲು ಸಿದಟಛಿತೆ ನಡೆದಿದೆ.  ವಿತರಣೆಗೆ ಖಾಸಗಿಯವರು ಪಡೆದರೆ ಗ್ರಾಹಕರಿಗೆ ಹೆಚ್ಚು ಅನಾನುಕೂಲವಾಗುತ್ತದೆ. ಖಾಸಗಿಯವರು ಮನಬಂದಂತೆ ವಿದ್ಯುತ್‌ ಮಾರಾಟ ಮಾಡಿಕೊಳ್ಳುತ್ತಾರೆ.

ಗ್ರಾಹಕರಿಗೆ ಆರ್ಥಿಕ ಹೊರೆ ಬೀಳಲಿದೆ ಎಂದು ಹೇಳಿದರು. ಖಾಸಗಿ ಕೊಳವೆ  ಬಾವಿ, ಬಡವರು ಬಳಸುವ ವಿದ್ಯುತ್‌ ಬೆಲೆ ನಿಗದಿ ಮಾಡುತ್ತಾರೆ. ವಿದ್ಯುತ್‌ ಸೇವಾ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಲೆಕ್ಕಾಧಿಕಾರಿ ರಘು, ಇಇ ನಾಗರಾಜು,  ಎಇಇ ರಾಜಶೇಖರಮೂರ್ತಿ, ಕೃಷ್ಣ, ಕೇಂದ್ರ,

ಯೂನಿಯನ್‌ ಕೇಂದ್ರ ಕಾರ್ಯ ಸಮಿತಿ ಸದಸ್ಯ ರಘು, ಎ.ಇ.ಮನುಕುಮಾರ್‌, ಜೆ.ಇ.ರವೀಂದ್ರ, ಶಿವ ಶಂಕರ್‌ ಮೂರ್ತಿ, ಫಾಜಿಲ್‌ ಅಹಮದ್‌, ಕೃಷ್ಣೇಗೌಡ, ಸ್ಥಳೀಯ ಸಮಿತಿ ಅಧ್ಯಕ್ಷ  ಜಯಪಾಲ್‌, ಉಪಾಧ್ಯಕ್ಷ ಕೆ.ಎನ್‌. ಮಂಜುನಾಥ್‌, ಉಪಕಾರ್ಯದರ್ಶಿ ಮಧುಸೂಧನ್‌, ನಿರ್ದೇಶಕರಾದ ಈಶ್ವರಪ್ಪ, ರಘುಕುಮಾರ್‌, ಜೆ.ಮಂಜುನಾಥ್‌, ಮಾಂತೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next