Advertisement

ವಿವಿಧ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ

05:15 PM Oct 06, 2020 | Suhan S |

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಭೂ ಸುಧಾರಣೆ, ಕಾರ್ಮಿಕ ಹಾಗೂ ಕೃಷಿ ಉತ್ಪನ್ನಮಾರುಕಟ್ಟೆ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ  ಅಸಂಘಟಿತ ಕಾರ್ಮಿಕ ಜಿಲ್ಲಾ ಕಾಂಗ್ರೆಸ್‌ಘಟಕದಿಂದ ಸೋಮವಾರ ನಗರದಲ್ಲಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸುವಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.

Advertisement

ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ. ಮಂಜೇಗೌಡ, ಅಸಂಘಟಿತಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ರಸೂಲ್‌ ಖಾನ್‌ ಸೇರಿದಂತೆ ಅನೇಕ ಮುಖಂಡರು, ನಗರದ ಹನುಮಂತಪ್ಪ ವೃತ್ತದಿಂದ ಆಜಾದ್‌ ಪಾರ್ಕ್‌ ವೃತ್ತದವರೆಗೆ ಎತ್ತಿನ ಗಾಡಿಗಳಲ್ಲಿ ಕುಳಿತು ಮೆರವಣಿಗೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿದರು.

ಅಸಂಘಟಿತ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷ ರಸೂಲ್‌ಖಾನ್‌ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದಾಗಿ ದೇಶಾದ್ಯಂತ ಇರುವ ಸಣ್ಣ ರೈತರ ಹಿಡುವಳಿಗಳು ಶ್ರೀಮಂತರ ಪಾಲಾಗಲಿದ್ದು, ರೈತ ಸಮುದಾಯದಲ್ಲಿ ಅಭದ್ರತೆ ಉಂಟಾಗುತ್ತದೆ. ಅಲ್ಲದೆ ಆಹಾರ ಭದ್ರತೆಗೂ ಅಪಾಯ ಎದುರಾಗಲಿದೆ. ಕೃಷಿ ಭೂಮಿಗಳು ಮಾಯವಾಗಿ ಕೃಷಿಯೇ ನಾಶವಾಗಲಿದೆ. ಆದ್ದರಿಂದ ಭೂಸುಧಾರಣೆ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಕೂಡಲೇ ರದ್ದು ಮಾಡಬೇಕೆಂದು ತಿಳಿಸಿದರು.

ಧರಣಿಯ ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಧರಣಿಯಲ್ಲಿ ಕಾಂಗ್ರೆಸ್‌ ಮುಖಂಡ ವಿನಾಯಕ್‌, ಮೂರ್ತಿ, ಸೋಮಶೇಖರ್‌,ಮೋಹನ್‌ಕುಮಾರ್‌, ಪ್ರಕಾಶ್‌, ಲೋಕೇಶ್‌, ರಮೇಶ್‌, ಯೋಗೇಶ್‌ಗೌಡ, ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next