Advertisement
ಪಟ್ಟಣದ ತಾಪಂ ಕಚೇರಿಯಿಂದ ಅಂಬೇಡ್ಕರ್ ವಿಚಾರ ವೇದಿಕೆ, ಬೌದ್ದಮಹಾಸಭಾ, ಗಂಗಾಮತ ಸಮಾಜಸೇರಿದಂತೆವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಅನಂತ್ ರಾಂ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ, ಯೋಗಿ ಆದಿತ್ಯನಾಥ್ ಅವರ ಪ್ರತಿಕೃತಿದಹಿಸಿ ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
Related Articles
Advertisement
ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ :
ಶ್ರೀರಂಗಪಟ್ಟಣ: ಉತ್ತರ ಪ್ರದೇಶದಲ್ಲಿ ಅತ್ಯಾ ಚಾರವನ್ನು ಖಂಡಿಸಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡ ಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖಂಡರು ತಹಶೀಲ್ದಾರ್‌ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಕ್ಷದ ತಾಲೂಕು ಅಧ್ಯಕ್ಷ ಗೋವಿಂದರಾಜು ನೇತೃತ್ವದಲ್ಲಿ ಆಗಮಿಸಿದ ಕಾರ್ಯರ್ತರು, ಉತ್ತರ ಪ್ರದೇಶ ಸರ್ಕಾರ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿಲ್ಲ. ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಹೆಚ್ಚಾ ಗುತ್ತಿ ದ್ದರೂ ಸರ್ಕಾರ ಕಾನೂನು ಕ್ರಮ ಕೈಗೊಂ ಡಿಲ್ಲ. ಅತ್ಯಾಚಾರ ತಡೆಗೆ ಅಲ್ಲಿನ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.
ಪಕ್ಷದ ತಾಲೂಕು ಉಸ್ತುವಾರಿ ವಿ. ಸುರೇಶ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದರೂ,ದೇಶದಲ್ಲಿಕಾನೂನುಇಲ್ಲವೇನೋಎಂಬ ಪ್ರಶ್ನೆಯಾಗಿದೆ. ಇದರಿಂದ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಉತ್ತರ ಪ್ರದೇಶದ ಸರ್ಕಾರವನ್ನು ವಜಾಗೊಳಿಸ ಬೇಕು. ಉತ್ತಮ ಸಮಾಜ ನಿರ್ಮಾಣ ವಾಗಬೇಕು. ಪೊಲೀಸರಿಂದ ಅವರಿಗೆ ನ್ಯಾಯ ಕಲ್ಪಿಸ ಬೇಕು ಎಂದು ಹೇಳಿದರು. ಉಪ ತಹಶೀಲ್ದಾರ್ ಪುಟ್ಟ ಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಕಾರ್ಯದರ್ಶಿ ಚುಂನಚಯ್ಯ, ಶಿವಯ್ಯ, ರವಿಕುಮಾರ ಸೇರಿದಂತೆ ಮುಖಂಡರು ಹಾಜರಿದ್ದರು.