ಭಾರತೀನಗರ: ರಸ್ತೆ ಒತ್ತುವರಿ ತೆರವುಗೊಳಿಸುವ ಸಂಬಂಧ ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿ ಅವರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆಂದು ಆರೋಪಿಸಿ ಸಮೀಪದ ಕೂಳಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು ತಹಶೀಲ್ದಾರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಒದಿ;- ಕಿರಾಣಿ ಅಂಗಡಿಗಳೊಂದಿಗೆ ಫ್ಲಿಪ್ ಕಾರ್ಟ್ ಸಹಯೋಗ
ಅರುವನಹಳ್ಳಿ, ಕೂಳಗೆರೆ ಗ್ರಾಮದ ಸರ್ವೆ ನಂ. 240, 269, 270, 241ರಲ್ಲಿ 0.22 ಗುಂಟೆ ಜಮೀನಿನಲ್ಲಿರುವ ಕಾಲುದಾರಿಯು ಗ್ರಾಮದ ಹಲವು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಕೂಳಗೆರೆ ಗ್ರಾಮದಿಂದ ಅರೆದೊಡ್ಡಿ ಗ್ರಾಮಕ್ಕೂ ಸಂಪರ್ಕ ಕಲ್ಪಿಸುವ ಕಾಲುದಾರಿಯಾಗಿತ್ತು.
ಕ್ರಮೇಣ ಅಕ್ಕಪಕ್ಕದ ರೈತರು ಕಾಲು ದಾರಿಯನ್ನು ಆಕ್ರಮಿಸಿಕೊಂಡು ಒತ್ತು ವರಿ ಮಾಡಿಕೊಂಡಿದ್ದಾರೆ. ಇದರಿಂದ ರೈತರು ಜಮೀನುಗಳಿಗೆ ತೆರಳಲು ಅನಾನುಕೂಲವಾಗಿದ್ದು, ಈ ಸಂಬಂಧ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದ ಪರಿಣಾಮವಾಗಿ ತಾಲೂಕು ಭೂಮಾಪನಾಧಿಕಾರಿ, ಕಾಲುದಾರಿಯ ಅಳತೆ ಮಾಡಿ, ನಕಾಶೆ ತಯಾರು ಮಾಡಿರುತ್ತಾರೆ.