ಹುನಗುಂದ: ಜಮ್ಮು ಕಾಶ್ಮೀರ ಕಥುವಾದಲ್ಲಿ ಮುಸ್ಲಿಂ ಅಲೆಮಾರಿ ಬಕೇರವಾಲ ಜನಾಂಗದ 8 ವರ್ಷದ ಅಪ್ರಾಪ್ತ ಬಾಲಕಿಗೆ ನಿದ್ರೆ ಮಾತ್ರೆ ನೀಡಿ ಅವಳ ಮೇಲೆ ಮತ್ತು ಯುಪಿಎ ಉನ್ನಾವೋದಲ್ಲಿಯ ಬಾಲಕಿ ಅತ್ಯಾಚಾರವೆಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿ ಧಿಸುವಂತೆ ಲಿಮ್ರಾ ವೆಲ್‌ಫೇರ್ ಅಸೋಸಿಯೇಷನ್ ಮತ್ತು ಮುಸ್ಲಿಂ ಜಾಗೃತಿ ವೇದಿಕೆ ಕಾರ್ಯಕರ್ತರು ಒತ್ತಾಯಿಸಿ ಪ್ರತಿಭಟಿಸಿ ತಹಶೀಲ್ದಾರ್ ಚೋರಗಸ್ತಿಯವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ನಿರತ ಸಂಸ್ಥೆ ಅಧ್ಯಕ್ಷ ಅಬ್ದುಲ್‌ರಜಾಕ್ ತಟಗಾರ ಮಾತನಾಡಿ, ಮುಗª ಬಾಲಕಿ ಮೇಲೆ 8 ದಿನಗಳವರೆಗೆ ಮಗುವಿಗೆ ಒತ್ತಾಯ ಪೂರ್ವಕವಾಗಿ ಮಾದಕ ವಸ್ತು ಕುಡಿಸಿ ಅವಳ ಮೇಲೆ ನಡೆಸಿದ ಅತ್ಯಾಚಾರ ಮನುಕುಲಕ್ಕೆ ಹೇಯ ಕೃತ್ಯವಾಗಿದೆ. ಈ ಪ್ರಕರಣ ಜಾತಿ ಜನಾಂಗಕ್ಕೆ ಸೀಮಿತಗೊಳಪಡದೆ ಮಾನವ ಕುಲಕ್ಕೆ ಅನ್ಯಾಯವಾದಂತಾಗಿದೆ. ಬಂಧನಕ್ಕೊಳಗಾದ ಆರೋಪಿ ಗಳಿಗೆ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಮುಖಂಡ ಇಮಾಮ ಕರಡಿ ಮಾತನಾಡಿ, ಮಹಿಳೆ ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ಇಂಥ ಅತ್ಯಾಚಾರ ಪ್ರಕರಣಗಳು ಪದೆ ಪದೆ ಹೆಚ್ಚುತ್ತಿವೆ. ಇಂತವುಗಳಿಗೆ ಅತ್ಯುನ್ನತ ಕಾನೂನು ರೂಪಿಸಿ ಅಂಥವರಿಗೆ ಕಠಿಣ ಶಿಕ್ಷೆ ವಿಧಿ ಸಿ ಪ್ರಕರಣ ಮತ್ತೂಮ್ಮೆ ಮರುಕಳಿಸದಂತೆ ಸರಕಾರ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಜಾಗೃತಿ ವೇದಿಕೆ ಸಂಚಾಲಕ ಮೆಹಬೂಬ ಗದ್ವಾಲ್ ಮಾತನಾಡಿ, ಎರಡು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಜೀವರಕ್ಷಣೆಗೆ ಕಾನೂನು ಭದ್ರತೆ ಒದಗಿಸಬೇಕು. ಪ್ರಕರಣಕ್ಕೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದಲ್ಲಿ ಜಾಗೃತಿ ವೇದಿಕೆಯಿಂದ ದೇಶಾದ್ಯಂತ ಬೃಹತ್ ಜನಾಂದೋಲನ ನಡೆಸಲಾಗುವುದು ಎಂದರು.
ಜೈನಸಾಬ ಹಗೇದಾಳ, ರಜಾಕ್ ರೇಶ್ಮಿ, ಬಂದಗಿಸಾಬ ಕರಡಿ, ರಫಿಕ್ ಕೋಡಿಹಾಳ, ಫಾರೂಕ್ ರೋಣದ, ಯಾಶೀನ್ ಗಡೇದ, ರಿಜ್ವಾನ್ ಮೌಲ್ವಿ, ಸಲೀಂ ಬಂಗಾರಗುಂಡ, ಅಲ್ಲಾಭಕ್ಷ ಕಂದಗಲ್ಲ ಇತರರು ಪಾಲ್ಗೊಂಡಿದ್ದರು.