Advertisement

ಕಳಪೆ: ಶಾಲೆ ಕಟ್ಟಡ ಕಾಮಗಾರಿಗೆ ತಡೆ, ಪ್ರತಿಭಟನೆ

03:11 PM Apr 11, 2021 | Team Udayavani |

ಚಾಮರಾಜನಗರ: ಶಾಲಾ ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಎಂದುಆರೋಪಿಸಿ ಗ್ರಾಮಸ್ಥರು ಕಾಮಗಾರಿ ತಡೆ ಹಿಡಿದಿರುವ ಘಟನೆ ತಾಲೂಕಿನ ನರಸಮಂಗಲದಲ್ಲಿ ನಡೆದಿದೆ.

Advertisement

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 15 ಲಕ್ಷ ರೂ.ವೆಚ್ಚದಲ್ಲಿನಿರ್ಮಿಸುತ್ತಿ ರುವ ಕೊಠಡಿ ಕಾಮಗಾರಿಕಳಪೆಯಾಗಿದೆ ಎಂದು ಗ್ರಾಮಸ್ಥರು ಕಾಮಗಾರಿಸ್ಥಗಿತಗೊಳಿಸಿ, ಪ್ರತಿಭಟಿಸಿದರು. ಶಾಸಕರ ಗಮನಕ್ಕೂ ತರದೇ ಶಾಲಾ ಕಟ್ಟಡಕಾಮಗಾರಿಯನ್ನು ತರಾತುರಿಯಲ್ಲಿಮಾಡುತ್ತಿರುವುದು ಗ್ರಾಮಸ್ಥರಿಗೆ ಅನುಮಾನ ಬಂದು ಕಾಮಗಾರಿಯನ್ನು ಪರಿಶೀಲಿಸಿದಾಗಅಡಿಪಾಯ ತೆಗೆಸದೇ ಜಲ್ಲಿ ಮತ್ತು ಎಂ.ಸ್ಯಾಂಡನ್ನು ಮಿಶ್ರಣ ಮಾಡಿ ಹಾಕಿರುವುದು ಗಮನಕ್ಕೆ ಬಂದಿದೆ.

ಗುತ್ತಿಗೆದಾರನನ್ನು ಕೇಳಿದಾಗ ಒಂದು ಅಡಿ ಕಾಂಕ್ರೀಟ್‌ ಹಾಕಿದ್ದೀನಿ ಎಂದಿದ್ದಾರೆ. ಗ್ರಾಮಸ್ಥರೇ ಕಾಂಕ್ರೀಟ್‌ ಕೆದಕಿ ನೋಡಿದಾಗನೆಲದ ಮೇಲೆಯೇ 2 ಇಂಚಿನಷ್ಟು ಕಾಂಕ್ರೀಟ್‌ಹಾಕಿದ್ದು ಗಮನಕ್ಕೆ ಬಂದಾಗ ಸ್ಥಳೀಯರು ಕೆಂಡಾಮಂಡಲವಾಗಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿಯನ್ನು ಯಾರೂ ಪರಿಶೀಲಿಸುವುದಿಲ್ಲ ಎಂದು ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ಮಾಡುತ್ತಿರುವುದು ಸರಿಯಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕೆಂದು ಗ್ರಾಮಸ್ಥರಾದ ರಮೇಶ್‌ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next