ರಾಮನಗರ: ಆನ್‌ಲೈನ್ ಶಿಕ್ಷಣ ಯಾವ ತರಗತಿಗೂ ಬೇಡವೇ ಬೇಡ ಎಂದು ಆಗ್ರಹಿಸಿ, ಕನ್ನಡಪರ ಹೋರಾಟ ಗಾರ ವಾಟಾಳ್ ನಾಗರಾಜ್ ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಆನ್‌ಲೈನ್ ಶಿಕ್ಷಣ ಭೂತದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಆನ್ ಲೈನ್ ಶಿಕ್ಷಣ ಜಾರಿಗೆ ತರಲು ಸರ್ಕರ ಯತ್ನ ಮಾಡುತ್ತಿದೆ. ತಜ್ಞರ ವರದಿಯನ್ನು ಸರ್ಕಾರ ತರಿಸಿಕೊಂಡಿದೆ. ತಜ್ಞರು ಆರಾಮವಾಗಿ ಮನೆಯಲ್ಲಿ ಕುಳಿತು ವರದಿ ಕೊಟ್ಟುಬಿಟ್ಟಿದ್ದಾರೆ. ಆನ್‌ಲೈನ್ ಶಿಕ್ಷಣ ಬೇಕೇ ಬೇಕು ಎನ್ನುವುದು ಸರಿಯಲ್ಲ. ಗ್ರಾಮೀಣ ಪ್ರದೇಶದ ವಿದ್ಯಾ ರ್ಥಿಗಳ ಬಗ್ಗೆ ತಜ್ಞರಿಗೆ ಅರಿವಿಲ್ಲ ಎಂದು ತಮ್ಮ ಅಸಮಾ ಧಾನ ಹೊರ ಹಾಕಿದರು.
ಆನ್‌ಲೈನ್ ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಲ್ಯಾಪ್ ಟಾಪ್ ಮತ್ತು ವ್ಯವಸ್ಥೆಗೆ 50 ಸಾವಿರ ರೂ. ವೆಚ್ಚವಾಗುತ್ತ ದೆ. ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ 5 ರೂ. ಗಳಿಗೂ ಜನ ಒದ್ದಾಡುತ್ತಿದ್ದಾರೆ. ಇನ್ನು ಲ್ಯಾಪ್‌ಟಾಪ್ ತರೋದಾದರೂ ಎಲ್ಲಿಂದ? ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್, ಇಂಟರ್‌ನೆಟ್ ಸರಿಯಾಗಿ ಇರೋಲ್ಲ. ಸಮಸ್ಯೆ ಗಳು ಬಹಳಷ್ಟಿದೆ. ಹೀಗಾಗಿ ಆನ್‌ಲೈನ್ ಶಿಕ್ಷಣ ಸರಿ ಯಲ್ಲ ಎಂದು ತಮ್ಮ ವಾದಿಸಿದರು.
ಶನಿವಾರದಿಂದ ಪ್ರಾಣ ಉಳಿಸಿ ಚಳವಳಿ: ಸರ್ಕಾರ ಆನ್‌ಲೈನ್ ಶಿಕ್ಷಣ ಜಾರಿ ಮಾಡುವುದನ್ನು ಬಿಟ್ಟು ಮೊದಲು ಜನರ ಪ್ರಾಣ ಉಳಿಸಲಿ. ಈ ವಿಚಾರದಲ್ಲಿ ಸರ್ಕಾರವನ್ನು ಎಚ್ಚರಗೊಳಿಸಲು ಜುಲೈ 11ರ ಶನಿವಾರ ದಿಂದ ಪ್ರಾಣ ಉಳಿಸಿ ಚಳವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ವೈದ್ಯರ ಕೊರತೆಯಿದೆ, ಸರ್ಕಾರ ಮೊದಲು ಅದನ್ನು ನೀಗಿಸ ಬೇಕು ಎಂದರು.ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಬಾಯಿ, ಪ್ರಮುಖ ಸಿ.ಎಸ್.ಜಯಕುಮಾರ್, ಕೆ.ಜಯರಾಮು, ತ್ಯಾಗರಾಜ್, ಲೋಕೇಶ್ (ಎಸ್‌ಬಿಎಂ), ಮರಿಸ್ವಾಮಿ, ಪಾರ್ಥಸಾರಥಿ, ಸುರೇಶ್ ಕೊತ್ತಿಪುರ, ನಾರಾಯಣ ಸ್ವಾಮಿ ಹಾಜರಿದ್ದರು.