Advertisement

ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ : ನೂಪುರ್ ಶರ್ಮಾ ವಿರುದ್ಧ ಬೃಹತ್ ಪ್ರತಿಭಟನೆ

04:20 PM Jun 13, 2022 | Team Udayavani |

ಹುಮನಾಬಾದ್ : ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ ಭಾರತೀಯ ಇಮಾಮ್, ಜಮಾತ್ ಉಲ್ಮಾಹೀನ್, ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ನೂರ್ ಖಾನ್ ಅಖಾಡಾದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಅಂಬೇಡ್ಕರ್ ವೃತ್ತದ ವರೆಗೆ ನಡೆಯಿತು.
ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗವಹಿಸಿದರು. ಪ್ರತಿಭಟನೆ ಯುದ್ಧಕ್ಕೂ ಶರ್ಮಾ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಅಂಬೇಡ್ಕರ್ ವತ್ತದಲ್ಲಿ ಕೆಲಹೊತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನಬೀ ವಿರುದ್ದ ಮಾತಾಡುವ ಜನರ ವಿರುದ್ದ ಕಠಿಣ ಕಾನೂನು ರೂಪಿಸಬೇಕು. ಶರ್ಮಾ ಹಾಗೂ ಜಿಂದಾಲ್ ವಿರುದ್ದ ಕೂಡಲೆ ಸರ್ಕಾರಗಳು ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಇದನ್ನೂ ಓದಿ : ಶಿಕ್ಷಣದಿಂದ ಬಾಲಕಾರ್ಮಿಕತೆ ನಿರ್ಮೂಲನೆ ಸಾಧ್ಯ : ನ್ಯಾಯಾಧೀಶೆ ಬಿ.ಎಸ್‌. ರೇಖಾ

ಈ ಸಂದರ್ಭದಲ್ಲಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹುಮನಾಬಾದ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ನಿರ್ವಹಿಸಿದರು.

Advertisement

ಪಟ್ಟಣದಲ್ಲಿ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ಪೋಸ್ಟರ್ ಗಳನ್ನು ರಸ್ತೆಯಲ್ಲಿ ಅಂಟಿಸುವ ಮೂಲಕ ವಿವಾದ ಹುಟ್ಟಿಕೊಂಡಿತ್ತು. ರಸ್ತೆಯಲ್ಲಿನ ಪೋಸ್ಟರ್ ಗಳನ್ನು ಪೊಲೀಸರು ತಿರುವು ಗಳಿಸಿದರು. ತದನಂತರ ಕೆಲವೇ ಗಂಟೆಗಳಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಕೂಡ ಇಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next