Advertisement
ಎನ್‌ಪಿಎಸ್ ನೌಕರರ ವಿರೋಧಿಯಾಗಿದೆ. ನಮ್ಮ ಒಟ್ಟು ವೇತನದ ಶೇ.10ರಷ್ಟು ಹಣವನ್ನು ಕಟಾವು ಮಾಡಿ, ಅದನ್ನು ಖಾಸಗಿ ಸಂಸ್ಥೆಯಡಿ ಹೂಡಿಕೆ ಮಾಡಲಾಗುತ್ತಿದೆ. ಅದರಿಂದಾಗುವ ಲಾಭದ ಕುರಿತು ಮಾಹಿತಿ ಇಲ್ಲ, ನಿವೃತ್ತಿಯಾದ ನಂತರ ಮೊದಲು ಪಿಂಚಣಿ ನೀಡಲಾಗುತ್ತಿತ್ತು. ಆದರೆ ನಾವು ಹಾಕಿದ ಹಣದಲ್ಲಿಯೇ ಬಡ್ಡಿಯಾಗಿ ಪಿಂಚಣಿ ನೀಡುವ ಎನ್ ಪಿಎಸ್ ಇಡೀ ರಾಷ್ಟ್ರಾದ್ಯಂತ ಜಾರಿಯಲ್ಲಿದೆ. ಪಿಂಚಣಿ ಇಲ್ಲಿ ಅನಿಶ್ಚಿತವಾಗಿದೆ. ಹೊಸ ಪಿಂಚಣಿ ಯೋಜನೆರದ್ದುಗೊಳಿಸಿ ಮೊದಲಿನ ಪಿಂಚಣಿ ವ್ಯವಸ್ಥೆ ಜಾರಿಗೆ ಬರಬೇಕು. ಇಲ್ಲಿಯವರೆಗೆ ಎನ್‌ಪಿಎಸ್‌ಗೆ ಕಟಾವು ಮಾಡಿರುವ ಹಣದ ಮಾಹಿತಿ ಮತ್ತು ಹೂಡಿಕೆ ಕುರಿತು ವಿವರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
Related Articles
Advertisement
ಜಿ.ಬಿ. ಬಾಬಾನಗರ ಮತ್ತು ಎಸ್.ಎಸ್. ಚಿಮ್ಮಲಗಿ ಮಾತನಾಡಿ, ಎನ್‌ಪಿಎಸ್ ನೌಕರರ ಎದುರಿಸುವ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಅವಲೋಕಿಸಿ ನೂತನ ಪಿಂಚಣಿ ಯೋಜನೆ ರದ್ದು ಪಡಿಸಬೇಕು. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪದ್ಧತಿಯನ್ನೇ ಜಾರಿಗೊಳಿಸಬೇಕು ಎಂದರು.
ಎಸ್.ವಿ. ಮಠ, ಎಚ್.ಬಿ. ಬಾರಿಕಾಯಿ, ಚಿದಾನಂದ ಹೂಗಾರ, ವಿ.ಎಂ. ರಾಠೊಡ, ಆರ್. ಎಂ. ಬೆಳ್ಳುಬ್ಬಿ, ಎಸ್.ಜಿ. ಪರಗೊಂಡ, ಬಿ.ಜಿ. ಗೋಣಿ, ಜ್ಯೋತಿ ಶಿಂಧೆ, ರೇಣುಕಾ ಚವ್ಹಾಣ, ಎ.ಬಿ. ಕಲಾದಗಿ, ಎಸ್.ಐ. ರೇವೂರಕರ, ಸಿದ್ಧಾರ್ಥ ಕಳ್ಳಿಮನಿ, ಎ.ಎಂ. ಹಳ್ಳೂರ, ಶರಣಪ್ಪ ಮಾದರ, ಅನಿಲ ಬಬಲೇಶ್ವರ, ಮಹೇಂದ್ರ ಬಡಿಗೇರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂಡಿ: ನೂತನ ಪಿಂಚಣಿ ಯೋಜನೆಯಿಂದ ಬಾಧಿ ತರಾಗಿರುವ ನೌಕರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಆರನೇ ವೇತನ ಆಯೋಗಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಶಿರಸ್ತೇದಾರ ಪಿ.ಎಚ್. ಗಲಗಲಿ ಅವರಿಗೆ ಸಲ್ಲಿಸಿದರು.
ಈ ವೇಳೆ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಕೇಂದ್ರ ಸರ್ಕಾರ 2004ರಲ್ಲಿ ಅವೈಜ್ಞಾನಿಕ ಸಿದ್ಧಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್‌ಪಿಎಸ್ ಯೋಜನೆಯನ್ನು ಜಾರಿಗೊಳಿಸಿದ ತರುವಾಯಈ ಯೋಜನೆಯನ್ನು ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯ ಸರ್ಕಾರಗಳು ನೂತನ ಪಿಂಚಣಿ ಯೋಜನೆ ಅಳವಡಿಸಿಕೊಂಡಿರುತ್ತವೆ. ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 1.80 ಲಕ್ಷ ನೌಕರರು ಈ ಪಿಂಚಣಿ ಯೋಜನೆಯಿಂದ ದೂರ ಉಳಿದಿದ್ದು ಅವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ನೌಕರರಿಗೆ ಪಿಂಚಣಿ ದೊರೆಯುವಂತೆ ಮಾಡಲು ಆರನೇ ವೇತನ ಆಯೋಗದ ಮುಂದೆ ಶಿಫಾರಸು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಬಿ.ಎ.ರಾವೂರ, ಪಿ.ಜೆ. ಕೊಡಹೊನ್ನ, ಅಂಬಣ್ಣ ಸುಣಗಾರ, ಎಸ್.ವೈ. ಹರಳಯ್ಯ, ಐ.ಸಿ.ಕಂಬಾರ, ಎಸ್.ಆರ್. ಪಾಟೀಲ, ಎ.ಎ. ಬಿರಾದಾರ, ಪಿ.ಎಸ್. ಚಾಂದಕವಟೆ, ಎಸ್. ಕೆ. ಸೊನಕನಳ್ಳಿ, ಎಸ್.ಬಿ. ಝಳಕಿ, ಪ್ರಭು ಹೂಗಾರ, ಪಂಡಿತ ಕೊಡಹೊನ್ನ, ಎ.ಎಸ್. ಸರಸಂಬಿ, ಎಸ್. ಎನ್. ಕೋಳೇಕರ, ಆರ್.ಜಿ. ಬಂಡಿ ಇದ್ದರು.