Advertisement

ಎನ್‌ಇಪಿ ಜಾರಿ ವಿರೋಧಿಸಿ ಪ್ರತಿಭಟನೆ

01:10 PM Dec 15, 2021 | Team Udayavani |

ಯಾದಗಿರಿ: ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿಯೂ ಉಪನ್ಯಾಸಕರ, ಮೂಲಭೂತ ಸೌಲಭ್ಯಗಳ ಕೊರತೆ ಕಣ್ಣಿಗೆ ರಾಚುವಂತಿದೆ. ಇಂತಹ ಸಮಸ್ಯೆ ಪರಿಹರಿಸದೇ ಏಕಾಏಕಿ ಹೊಸ ಶಿಕ್ಷಣ ನೀತಿ ಜಾರಿ ವಿರೋಧಿಸಿ ಎಐಡಿಎಸ್‌ಒ ಸಂಘಟನೆಯಿಂದ ನಗರದ ಸುಭಾಷ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ಅಕ್ಕಮಹಾದೇವಿ ವಿ.ವಿ. ವಿಜಯಪೂರ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ದಿಢೀರ್‌ ಎನ್‌ಇಪಿ 2020 ಜಾರಿ ಮಾಡಿದೆ. ಗುವಿವಿ ಈಗಾಗಲೇ ಸುಮಾರು ಶೇ.90 ಕಾಯಂ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿ ಇವೆ. ಇದರಿಂದ ಕನಿಷ್ಟ ಗುಣಮಟ್ಟದ ಶಿಕ್ಷಣ ಮತ್ತು ಸಮರ್ಪಕ ಪರೀಕ್ಷೆ, ಮೌಲ್ಯಮಾಪನ, ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ದೊರಕದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ಸಂದರ್ಭದಲ್ಲಿ ರಾಜ್ಯ ನಾಯಕರಾದ ವೆಂಕಟೇಶ ದೇವದುರ್ಗಾ, ಜಿಲ್ಲಾ ಸಮಿತಿ ಸದಸ್ಯರಾದ ಮಹ್ಮದ್‌ ಅಶ್ರಫ್‌, ರಾಜೇಶ್ವರಿ ಮನಗನಾಳ, ಮೌನೇಶ, ಭಾಗ್ಯಜೋತಿ, ವಿದ್ಯಾರ್ಥಿಗಳಾದ ಅಶ್ವಿ‌ನಿ, ಆಶಪ್ಪಾ, ಮೌನೇಶ್‌ ಸೇರಿದಂತೆ ನೂರಾರು ಪದವಿ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next