Advertisement

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಆಗ್ರಹ

04:08 PM Nov 20, 2020 | Suhan S |

ಶಿವಮೊಗ್ಗ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸಬೇಕೆಂದು ಒತ್ತಾಯಿಸಿಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿಬಣದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಕೋವಿಡ್ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ನೆರವು ನೀಡದೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಮರಾಠಿಗರನ್ನು ಒಲಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದರು.

ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮರಾಠಿಗರು ಎಲ್ಲೂ ಕೂಡ ಸ್ವಾಗತಿಸಿಲ್ಲ. ಪ್ರಾಧಿಕಾರ ರಚನೆಗೆ ವಿಜಯೋತ್ಸವ ಆಚರಿಸಿದ್ದು ಎಲ್ಲಿಯೂ ಕಂಡು ಬಂದಿಲ್ಲ. ಮರಾಠಿಗರಿಗೆ ಪ್ರಾಧಿ  ಕಾರದ ಅವಶ್ಯಕತೆ ಇಲ್ಲದಿರುವುದು ಅರಿವಾಗುತ್ತದೆ ಎಂದು ಹೇಳಿದರು.

ಮರಾಠಿಗರು ಬೇಡಿಕೆಗಳನ್ನು ಈಡೇರಿಸ  ಬೇಕೆಂದು ಹೋರಾಟದ ಮೂಲಕ ಒತ್ತಾಯ ಮಾಡಿದ್ದರೆ ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ50 ಕೋಟಿ ರೂ. ಹಣವನ್ನು ಪ್ರವಾಹಪೀಡಿತರಿಗೆ ಉತ್ತರ ಕರ್ನಾಟಕದ ನೊಂದರೈತರಿಗೆ ನೀಡುವ ಮೂಲಕ ರಾಜ್ಯದ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು. ಪ್ರಾಧಿಕಾರ ರಚನೆ ಮಾಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಗರಿಗೂ ಕೂಡ ಪ್ರಾಧಿ ಕಾರ ರಚಿಸಬಹುದು. ಬೇಕಾದರೆ ಮರಾಠಿಗರ ಬೇಡಿಕೆಗಳನ್ನು ಸರ್ಕಾರ ಪರಿಶೀಲಿಸಿ ಈಡೇರಿಸಲಿ. ಆದರೆ ಅಭಿವೃದ್ಧಿ ಪ್ರ ಧಿಕಾರ ರಚಿಸಬಾರದು ಎಂದು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪ್ರಮುಖರಾದ ರವಿಪ್ರಸಾದ್‌, ಎಸ್‌.ಎಂ.ಮಧುಸೂದನ್‌, ರಘುನಂದನ್‌, ನಯಾಜ್‌ ಎಂ.,ನೂರುಲ್ಲಾ, ಎಸ್‌. ಭರತ್‌, ಶಿವಕುಮಾರ್‌, ಅಮೃತ್‌, ಜಯಕೀರ್ತಿ, ಪ್ರದ್ಯುಮ್ನ ಮತ್ತಿತರರು ಇದ್ದರು.

Advertisement

ಸಾಗರದಲ್ಲಿ ಕರವೇ ಪ್ರತಿಭಟನೆ :

ಸಾಗರ: ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುವ ಬದಲು ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವುದು ಹಾಗೂ ಕನ್ನಡ ಪ್ರಾಧಿಕಾರಕ್ಕೆ ಅನುದಾನ ಕಡಿಮೆ ನೀಡಿ ಮರಾಠಾ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡುತ್ತಿರುವುದನ್ನು ಖಂಡಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ವತಿಯಿಂದ ಉಪ ವಿಭಾಗಾಧಿ ಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ರಾಜ್ಯ ಸರ್ಕಾರ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ

ಮಾನ್ಯತೆ ಸಿಗಬೇಕು ಎನ್ನುವುದು ಪ್ರತಿಯೊಬ್ಬ ಕನ್ನಡಿಗ ಹಾಗೂ ಕನ್ನಡಪರ ಸಂಘಟನೆಗಳ ಒತ್ತಾಸೆಯಾಗಿದೆ. ಆದರೆ ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ. ನೀಡಿ, ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಅದಕ್ಕೆ 50 ಕೋಟಿ ರೂ. ಅನುದಾನ ನೀಡಿರುವುದು ಸರ್ಕಾರದ ಕನ್ನಡ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ದೂರಲಾಗಿದೆ.

ವೇದಿಕೆಯ ಪ್ರಮುಖರಾದ ಮೋಹನ್‌, ಫಯಾಜ್‌, ಕಬೀರ್‌, ಸಚಿನ್‌, ಶಶಿಧರ್‌, ಸತೀಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next