Advertisement

ಜ್ಞಾನ ವ್ಯಾಪಿ ಮಸೀದಿ ವಿರುದ್ಧ ಷಡ್ಯಂತ್ರ-ಪ್ರತಿಭಟನೆ

03:32 PM May 18, 2022 | Niyatha Bhat |

 ಶಿವಮೊಗ್ಗ: ಜ್ಞಾನವ್ಯಾಪಿ ಮಸೀದಿ ವಿರುದ್ಧದ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ (ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿಆಫ್‌ ಇಂಡಿಯಾ) ಕಾರ್ಯಕರ್ತರು ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜ್ಞಾನವ್ಯಾಪಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ. ಅದು ಕಾರಂಜಿ. ಅದು ಮುಸ್ಲಿಮರು ಪ್ರಾರ್ಥನೆಗೂ ಮೊದಲು ಕೈಕಾಲು ತೊಳೆದುಕೊಳ್ಳುವ ಜಾಗವಾಗಿದೆ. ಈಗ ಅದನ್ನೇ ಶಿವಲಿಂಗ ಎಂದು ಬಿಂಬಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

1991ರ ಭಾರತದ ಆರಾಧನಾ ಕಾಯ್ದೆ ಪ್ರಕಾರ 1947ರಿಂದ ಯಾವ ಸ್ಥಳದಲ್ಲಿ ಮಸೀದಿಗಳು, ಚರ್ಚ್‌ಗಳು, ದೇವಾಲಯಗಳು ಇರುತ್ತವೆಯೋ ಅವುಗಳನ್ನು ಇದ್ದ ಸ್ಥಿತಿಯ ಬಿಡಬೇಕು. ಮತ್ತು ಅವುಗಳಿಗೆ ರಕ್ಷಣೆ ಮಾಡಬೇಕು ಎಂದಿದೆ. ಆದರೆ, ಈ ಕಾಯ್ದೆಯನ್ನು ಮೀರಿ ಕೋಮುವಾದಿ ಶಕ್ತಿಗಳು ದೇಶದಲ್ಲಿ ವಿಷಬೀಜ ಬಿತ್ತಿ, ಕೋಮು ಸೌಹಾರ್ದತೆಯನ್ನು ಹಾಳುಗೆಡವಿ, ಮುಸ್ಲಿಮರ ಪವಿತ್ರ ಸ್ಥಳಗಳಾದ ಮಸೀದಿಗಳನ್ನು ಧ್ವಂಸ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ನ್ಯಾಯಾಲಯ ಕೂಡ 1991ರ ಆರಾಧನಾ ಕಾಯ್ದೆಯನ್ನು ಪರಿಶೀಲಿಸಲಿಲ್ಲ. ಕೇವಲ 5 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಆ ಜಾಗವನ್ನು ಚಿತ್ರೀಕರಣ ಮಾಡಲು ಅನುಮತಿ ನೀಡಿದೆ. ಇದು ಸರಿಯಲ್ಲ. ಬಿಜೆಪಿ ಸರ್ಕಾರ ಮುಸ್ಲಿಂ ವಿರೋ ಧಿಯಾಗಿದ್ದು, ಈ ದೇಶದ ಕಾನೂನನ್ನು ಗೌರವಿಸುತ್ತಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಮುಜೀಬ್‌ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next