Advertisement

ಜಗದೀಶ್‌ ಕಾರಂತರ ಬಂಧನ ವಿರೋಧಿಸಿ ಪ್ರತಿಭಟನೆ

03:51 PM Oct 01, 2017 | Team Udayavani |

ಆಲಂಕಾರು: ಹಿಂದೂ ಜಾಗರಣ ವೇದಿಕೆಯ ರಾಜ್ಯ ಪ್ರಮುಖರಾದ ಜಗದೀಶ್‌ ಕಾರಂತರ ಬಂಧನ ವಿರೋಧಿಸಿ ಆಲಂಕಾರು ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಆಲಂಕಾರು ಬಸ್‌ ತಂಗುದಾಣದ ಬಳಿ ಸಾಂಕೇತಿಕ ರಸ್ತೆ ತಡೆ ಮಾಡುವುದರ ಮೂಲಕ ಪ್ರತಿಭಟಿಸಲಾಯಿತು.

Advertisement

ಆಲಂಕಾರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪ್ಪೆ ಮಾತನಾಡಿ, ಸಿದ್ದ
ರಾಮಯ್ಯ ಸರಕಾರ ಹಿಂದೂಗಳ ದಮನಕ್ಕೆ ಪಣ ತೊಟ್ಟಂತಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕುಮ್ಮಕ್ಕು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದನ್ನು ಪ್ರತಿಭಟಿಸದಿದ್ದಲ್ಲಿ ರಾಜ್ಯ ಸರಕಾರ ಹಿಂದುಗಳ ಸರ್ವನಾಶ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಆರೊಪಿಸಿದರು.

ಆಲಂಕಾರು ಹಿಂದು ಜಾಗರಣ ವೇದಿಕೆಯ ಸಂಚಾಲಕ ಧನಂಜಯ ಗೌಡ, ಕಾರ್ಯದರ್ಶಿ ಹರೀಶ್‌ ನೆಕ್ಕಿಲಾಡಿ,ನಿಕಟಪೂರ್ವ ಅಧ್ಯಕ್ಷ ಮಲ್ಲೇಶ್‌.ಎನ್‌, ಪೂವಪ್ಪ ಗೌಡ ಇಚ್ಚಾರು, ಮಾಜಿ ತಾ.ಪಂ ಸದಸ್ಯ ದಯಾನಂದ ಗೌಡ ಆಲಡ್ಕ, ದಿನೇಶ್‌ ಕೇಪುಳು, ಸುಧಾಕರ ಪೂಜಾರಿ, ಜಯಂತ ಪೂಜಾರಿ ನೆಕ್ಕಿಲಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next