Advertisement
ಉತ್ತರಪ್ರದೇಶದ ಹತ್ರಾಸ್‌ನಲ್ಲಿಯುವತಿ ಮೇಲೆ ನಡೆದ ಅತ್ಯಾಚಾರ ಕೊಲೆಯನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ಉಗ್ರವಾಗಿ ಖಂಡಿಸುತ್ತದೆ. ಈ ಪೈಶಾಚಿಕ ಕೃತ್ಯವನ್ನು ಎಸಗಿದ ನಾಲ್ವರು ಯುವಕರು ಘಟನೆ ನಡೆದ ನಂತರವೂ ಯಾವುದೇ ಅಳುಕಿಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿದ್ದು ನಾಗರಿಕ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ. ಅತ್ಯಾಚಾರ ಮಾಡಿ, ಬೆನ್ನುಹುರಿಯನ್ನು ಮುರಿದು, ನಾಲಿಗೆ ಕತ್ತರಿಸಿ ಆಕೆಯನ್ನು ಅರೆಜೀವವನ್ನಾಗಿ ಮಾಡಿ ಅತ್ಯಾಚಾರಿಗಳು ಪಲಾಯನ ಮಾಡಿದ್ದರು. ಗಾಯಗೊಂಡು ನರಳುತ್ತಿದ್ದ ಸಂತ್ರಸ್ತೆಯನ್ನು ವೈದ್ಯಕೀಯ ನೆರವನ್ನು ನೀಡದೆ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ಸತಾಯಿಸಿ, ನಂತರ ಪೋಷಕರೇ ಆಕೆಯನ್ನು ಆಸ್ಪತ್ರೆಗೆ ದಾಖಲುಮಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ ಪೋಲಿಸರ ನಡವಳಿಕೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದುಪ್ರತಿಭಟನಾಕಾರರು ತಿಳಿಸಿದರು.
Related Articles
Advertisement
ಸಿರುಗುಪ್ಪ: ಉತ್ತರ ಪ್ರದೇಶ ಹತ್ರಾಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ್‌ಬಣ) ತಾಲೂಕು ಶಾಖೆ ಪದಾಧಿ ಕಾರಿಗಳುಗ್ರೇಡ್-2 ತಹಶೀಲ್ದಾರ್ ಮೂಲಕರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಘಟನ ಸಂಚಾಲಕ ಎಚ್.ಬಿ. ಗಂಗಪ್ಪ ಮಾತನಾಡಿ, ದಿನ ಬೆಳಗಾದರೆ
ದಲಿತರ ಮೇಲೆ ಸಾಮೂಹಿಕ ಕೊಲೆ, ಸುಲಿಗೆಗಳು, ಸಾಮೂಹಿಕ ಅತ್ಯಾಚಾರ, ಬೆತ್ತಲೆ ಮೆರವಣಿಗೆಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇಬ್ಬರುಯುವತಿಯರ ಮೇಲೆ ನಡೆದ ಸಾಮೂಹಿಕಅತ್ಯಾಚಾರ ಮತ್ತು ಕಗ್ಗೊಲೆ ಅಮಾನವೀಯ ಕೃತ್ಯವಾಗಿದೆ.
ಅತ್ಯಾಚಾರಕ್ಕೊಳಗಾದ ಕುಟುಂಬಕ್ಕೆ ರಕ್ಷಣೆ ನೀಡದೆ ಅತ್ಯಾಚಾರಕೊಳಗಾದ ಯುವತಿ ಶವವನ್ನು ರಾತ್ರೋರಾತ್ರಿ ದಹನ ಮಾಡಿರುವುದಲ್ಲದೇ ಘಾಸಿಗೊಂಡ ಕುಟುಂಬದವರು ಪ್ರತಿಕ್ರಿಯಿಸದೆ ಮೌನ ವಹಿಸಬೇಕೆಂದು ಫರ್ಮಾನು ಹೊರಡಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕಾರ್ಯವೈಖರಿ ಸರಿಯಾದುದಲ್ಲ. ಘಟನೆಯನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನಗಳು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಸ್ವತಃ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಬಹಿರಂಗವಾಗಿ ಅತ್ಯಾಚಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಠಾಕೂರ್ ಯುವಕರಲ್ಲಿ ಬಿಸಿರಕ್ತ ಇರುವುದರಿಂದ ಸಹಜವಾಗಿ ಇಂಥ ಪ್ರಕರಣಗಳು ನಡೆಯುತ್ತಿವೆ ಎಂಬ ಹೇಳಿಕೆಯು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ತಿ ಬಾಯಿಂದ ಬರುತ್ತದೆ ಎಂದರೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಾಚಾರಗಳು ನಡೆಯಲಿ ಎಂದು ಬಹಿರಂಗವಾಗಿಯೇ ಪ್ರಚೋದಿಸಿದಂತಾಗುತ್ತದೆ. ಆದ್ದರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ತಾಲೂಕು ಸಂಚಾಲಕ ಎಂ. ದೊಡ್ಡಬಸಪ್ಪ, ಸಂಘಟನಾ ಸಂಚಾಲಕರಾದ ಎಸ್. ವೀರೇಶ್, ಭೀಮೇಶ್, ಎಸ್. ರಫಿ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕರಾದ ಎಚ್. ವಿರೇಶ, ಮೂಕಪ್ಪನಡವಿ, ಹನುಮೇಶ, ಮೂಕಪ್ಪಬೆಳಗಲ್, ಸಣ್ಣಯ್ಯ, ತಿಮ್ಮಯ್ಯ, ಮಹಾದೇವಪ್ಪ ಇದ್ದರು.