ನೆಲಮಂಗಲ: ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ವಕೀಲರ ರಕ್ಷಣೆಗೆ ಸರ್ಕಾರಗಳು ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಹಾಗಾಗಿ, ಕಲಾಪ ಬಹಿಷ್ಕರಿಸಿದ್ದೇವೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದರು. ಪಟ್ಟಣದ ಸೊಂಡೇಕೊಪ್ಪ ರಸ್ತೆಯಲ್ಲಿರುವ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ವಕೀಲರು ಕಕ್ಷಿದಾರರ ಕಷ್ಟಗಳಿಗೆ ಸ್ಪಂದಿಸಿ, ಅವರ ಸಮಸ್ಯೆ ನಿವಾರಿಸುತ್ತಿದ್ದೇವೆ. ಆದರೆ, ಸಮಸ್ಯೆ ಬಗೆಹರಿಸುವ ವಕೀಲರಿಗೆ ಕೆಲವೊಂದು ಕಡೆ ರಕ್ಷಣೆಯಿಲ್ಲದಿರುವುದು ಬೇಸರ ತಂದಿದೆ. ವಕೀಲರ ರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನೂ ಈ ಬಾರಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಜೆಟ್‌ನಲ್ಲಿ ವಕೀಲರ ಕಲ್ಯಾಣ ನಿಧಿಗೆ ಅನುದಾನ ನೀಡಿಲ್ಲ. ಹೊಸ ವಕೀಲರ ಶಿಷ್ಯ ವೇತನವನ್ನು ಏರಿಕೆ ಮಾಡಿಲ್ಲ. ಆದ್ದರಿಂದ, ದೇಶಾದ್ಯಂತ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಕ್ಷಿದಾರರ ಪರದಾಟ: ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದ ಕಾರಣ ವಿವಿಧ ಪ್ರಕರಣಗಳಿಗೆ ಬಂದಿದ್ದ ನೂರಾರು ಕಕ್ಷಿದಾರರು ಪರದಾಡಬೇಕಾಯಿತು. ನಂತರ ಪ್ರಕರಣಗಳ ಮುಂದಿನ ದಿನಾಂಕವನ್ನು ಪಡೆದು ಬೇಸರದಿಂದ ಹಿಂದಿರುಗಿದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಕೆ.ಎನ್.ಗಂಗರಾಜು, ಜಂಟಿ ಕಾರ್ಯದರ್ಶಿ ರಾಜಶೇಖರಯ್ಯ, ಕಾರ್ಯದರ್ಶಿ ಆನಂದ್, ಮಾಜಿ ಅಧ್ಯಕ್ಷ ಸುರೇಂದ್ರನಾಥ್, ಸದಸ್ಯರಾದ ಬಿ.ಟಿ.ಮೋಹನ್‌ಕುಮಾರ್, ಹನುಮಂತರಾಜು, ಉಮೇಶ್‌ಬಾಬು, ಪ್ರಶಾಂತ್‌ಎಸ್.ಕೆ, ರಾಮಚಂದ್ರ, ವಸಂತ್‌ಕುಮಾರ್, ಕೇಶವ್, ವಸಂತ್, ಪ್ರದೀಪ್‌ಕುಮಾರ್ ಮತ್ತಿತರರು ಭಾಗವಹಿಸಿದ್ದರು.