Advertisement

ಸರ್ಕಾರ ರೈತ ಪರ ಕಾಯ್ದೆ ರೂಪಿಸಲಿ

04:11 PM Dec 02, 2020 | Suhan S |

ದಾವಣಗೆರೆ: ಎಪಿಎಂಸಿ ಕಾಯ್ದೆ ತಿದ್ದುಪಡಿ, ವೈಜ್ಞಾನಿಕ ಬೆಲೆ ನಿಗದಿ ಒಳಗೊಂಡಂತೆ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಬೆಂಬಲಿಸಿ ಮತ್ತು ಕೇಂದ್ರ ಸರ್ಕಾರ ರೈತ ವಿರೋಧಿ ಅನುಸರಿಸುತ್ತಿದೆ ಎಂದು ಆರೋಪಿಸಿ ಮಂಗಳವಾರ ಸಿಪಿಐ ಕಾರ್ಯಕರ್ತರು ನಗರದಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ, ವಿದೇಶಿ ಬೀಜ ಕಾಯ್ದೆ , ಭೂಸುಧಾರಣೆ ಹೆಸರಿನಲ್ಲಿದೇಶದ ರೈತಾಪಿ ವರ್ಗವನ್ನು ಬೀದಿಗೆ ತರಲಿವೆ. ರೈತರಿಗೆ ಮಾರಕವಾಗುವಕಾಯ್ದೆಗಳ ಹಿಂದಕ್ಕೆ ಪಡೆಯಬೇಕುಎಂದು ಒತ್ತಾಯಿಸಿ ದೆಹಲಿಯಲ್ಲಿರೈತರು ನಡೆಸುತ್ತಿರುವ ಹೋರಾಟಕ್ಕೆ ಸಿಪಿಐ ಬೆಂಬಲಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ರೈತರ ಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ, ಹೋರಾಟದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸುತ್ತಿರುವ ರೈತರನ್ನು ಪೊಲೀಸರ ಮೂಲಕ ತಡೆದು ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ನಡೆ ಖಂಡನಿಯ ಎಂದು ದೂರಿದರು.

ಕೂಡಲೇ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು. ರೈತ ಪರ ಕಾಯ್ದೆಗಳ ರೂಪಿಸಬೇಕು. ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಷರತ್ತುರಹಿತ ಮಾತುಕತೆ ನಡೆಸಿ, ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಯವರಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾರ್ಯದರ್ಶಿ ಎಚ್‌. ಕೆ. ರಾಮಚಂದ್ರಪ್ಪ, ಆನಂದರಾಜ್‌, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ರಾಮಣ್ಣ, ತಿಪ್ಪೇಶಿ, ಸರೋಜಾ, ರಮೇಶ್‌, ನಿಟ್ಟುವಳ್ಳಿ ಬಸಣ್ಣ, ಪ್ರಸನ್ನ ಕುಮಾರ್‌, ಗದ್ದಿಗೇಶ್‌ ಪಾಳೇದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next