ಗುಡಿಬಂಡೆ: ಭೂ ಸುಧಾರಣೆ, ಎಪಿಎಂಸಿ,ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ದಲಿತ ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ತಾಲೂಕಿನ ರೈತ ದಲಿತ, ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ತಾಲೂಕು ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಗಂಗಪ್ಪ ಮಾತನಾಡಿ, ಭೂ ಸಂಬಂಧಿ ಕಾನೂನು, ಎಪಿಎಂಸಿ ಕಾಯ್ದೆ, ಅಗತ್ಯ ಸಾಮಗ್ರಿ ಕಾಯ್ದೆಗಳಿಗೆ ತಿದ್ದುಪಡಿತರಲುಹೊರಡಿಸಿದ ಸುಗ್ರೀವಾಜ್ಞೆ ಹಿಂಪಡೆಯಬೇಕೆಂದು ಆಗ್ರಹಿಸಿದರು. ಕೆಪಿಆರ್‌ಎಸ್ ತಾಲೂಕುಕಾರ್ಯದರ್ಶಿ ಎಚ್.ಪಿ.ಲಕ್ಷ್ಮೀ ನಾರಾಯಣ ಮಾತನಾಡಿ, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಅಲ್ಲಿನ ಸರ್ಕಾರವನ್ನು ಕೂಡಲೇ ವಜಾಗೊಳಿಸ ಬೇಕು.ಅತ್ಯಾಚಾರಿಗಳನ್ನುಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕರ್ನಾಟಕ ಪ್ರಾಂತ್ಯ ರೈತ ಸಂಘಗಳ ಮುಖಂಡರಾದ ಜಯ ರಾಮರೆಡ್ಡಿ, ವರದರಾಜು, ಬೋಗೇನಹಳ್ಳಿ ಕೃಷ್ಣಪ್ಪ, ಇಸ್ಕೂಲಪ್ಪ, ವರ್ಲಕೊಂಡ ರಾಜು,ರಹಮತ್, ರಾಜು, ಆದಿನಾರಾಯಣ, ದೇವರಾಜು, ಕೊಂಡಪ್ಪ, ಶಿವಶಂಕರರೆಡ್ಡಿ, ಶ್ರೀನಿವಾಸ್ ಸೇರಿದಂತೆ ಇತರೆ ಸಂಘಟನೆಗಳು ಭಾಗವಹಿಸಿದ್ದವು.
ಗಾಂಧೀಜಿ ಕನಸು ನನಸಾಗಿಸಿ :
ಪಾತಪಾಳ್ಯ: ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲಿ ಆರೋಗ್ಯವೂ ಇರುತ್ತದೆ ಎಂಬುದು ಗಾಂಧೀಜಿಯವರ ವಾಕ್ಯವಾಗಿತ್ತು ಎಂದು ಪಾತಪಾಳ್ಯ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗೋವಿಂದಪ್ಪ ತಿಳಿಸಿದರು. ಪಾತಪಾಳ್ಯ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದಅವರು,ಹಳ್ಳಿಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಕನಸು ಕಂಡಿದ್ದ ಗಾಂಧೀಜಿಯವರ ಕನಸು ನನಸು ಮಾಡಬೇಕಾದದ್ದು ನಮ್ಮೆ ಲ್ಲರ ಕರ್ತವ್ಯ. ಸತ್ಯ, ಧರ್ಮದಿಂದ ನಡೆದುಕೊಳ್ಳುವುದರೊಂದಿಗೆ ಮನೆ ಗೊಂದು ಶೌಚಾಲಯ, ಬಚ್ಚಲುಗುಂಡಿ ನಿರ್ಮಿಸಿಕೊಂಡು ಗ್ರಾಮ ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರ ಮಹಾತ್ಮ ಗಾಂಧಿಜಿಯವರ ನೆನಪಿಗಾಗಿ ಉದ್ಯೋಗಖಾತ್ರಿಯೋಜನೆ ಯನ್ನು ಜಾರಿಗೆ ತಂದಿದ್ದು, ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿದ್ದು, ಅವುಗಳನ್ನು ಅರಿತು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿ ದರು. ಕರ ವಸೂಲಿಗಾರ ಕೆ.ಎಂ. ಗಂಗಿರೆಡ್ಡಿ, ಸಿಬ್ಬಂದಿ ಬಾಬಾಜಾನ್, ವಾಸೀಂ, ಜಲಗಾರರಿದ್ದರು.