Advertisement

ಕರಡು ಪ್ರತಿ ದಹಿಸಿ ಪ್ರತಿಭಟನೆ

03:42 PM Jan 02, 2021 | Team Udayavani |

ರಾಯಚೂರು: ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಹಿಂಪಡೆಯಲು ಒತ್ತಾಯಿಸಿ ಹಾಗೂದೆಹಲಿಯಲ್ಲಿ ನಡೆಯುತ್ತಿರುವ ರೈತರಹೋರಾಟ ಬೆಂಬಲಿಸಿ ಸಿಐಟಿಯು ಕೇಂದ್ರ ಸಮಿತಿ ಕರೆಯ ಮೇರೆಗೆ ಶುಕ್ರವಾರ ಕಾರ್ಮಿಕರು ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ತಮ್ಮ ಕೆಲಸದ ಸ್ಥಳಗಳಲ್ಲಿ ಕಾರ್ಮಿಕ,ಕೃಷಿ, ಅಗತ್ಯ ವಸ್ತುಗಳ ತಿದ್ದುಪಡಿಕಾಯ್ದೆ, ಎಪಿಎಂಸಿ ಕಾಯ್ದೆ, ಹೊಸಶಿಕ್ಷಣ ನೀತಿ ಕಾಯ್ದೆಯ ಪ್ರತಿಗಳನ್ನುಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಅಂಗನವಾಡಿ ನೌಕರರು,ಹಮಾಲಿ ಕಾರ್ಮಿಕರು, ಶಿಲ್ಪಾಮಡಿಕೇರ್‌ ಕಾರ್ಮಿಕರು, ರಾಯ್‌ ಕೆಮ್‌, ಟ್ರೆçಮ್ಯಾಕ್ಸ್‌, ಜಯಂತ್‌ ಮತ್ತು ವೈಟಿಪಿಎಸ್‌ ಕಾರ್ಮಿಕರು ಕಾರ್ಖಾನೆ ಗೇಟ್‌ ಬಳಿ ಪ್ರತಿಭಟನೆ ನಡೆಸಿದರು.

ಹಮಾಲಿ ಕಾರ್ಮಿಕರು ಎಪಿಎಂಸಿ ಕಾರ್ಯಾಲಯ ಮುಂದೆ, ಅಂಗನವಾಡಿ ನೌಕರರುಹರಿಜನವಾಡ, ಸಿಯತಲಾಬ್‌,ಜಹೀರಬಾದ್‌ ಅಲೋಪತಿಕ್‌ಸರ್ಕಲ್‌, ಎಲ್‌ಬಿ.ಎಸ್‌. ನಗರ, ಅಮರಖೇಡ್‌ ಸರ್ಕಲ್‌, ಶಕ್ತಿನಗರಕಲ್ಮಲಾ, ಚಂದ್ರಬಂಡ, ಜೇಗರಕಲ್‌,ಗುಂಜಹಳ್ಳಿ, ಉಡಮಗಲ್‌,ಖಾನಾಪೂರುಗಳಲ್ಲಿ ಕಾನೂನು ಪ್ರತಿಗಳನ್ನು ಸುಡುವ ಮೂಲಕಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷೆ ವರಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ಶರಣಬಸವ,ಉಪಾಧ್ಯಕ್ಷರಾದ ಎಚ್‌. ಪದ್ಮಾಪ್ರವೀಣ್‌ರೆಡ್ಡಿ ಗುಂಜಹಳ್ಳಿ, ಚೆನ್ನಾರೆಡ್ಡಿಭಾಸ್ಕರ್‌, ಸುರೇಶ್‌ ಪಾಟೀಲ್‌, ಈರಣ್ಣ ಸ್ವಾಮಿ, ಲಕೀÒ$¾ದೇವಮ್ಮ,ಗೋವಿಂದಾಸ್‌, ಗುರುರಾಜ, ಬಸವ ಪ್ರಕಾಶ್‌, ಸುರೇಶ, ಉಮೇಶ್‌,ರಾಮಿರೆಡ್ಡಿ, ಹೊನ್ನಪ್ಪ, ಸದ್ದಾಂ, ಪಾರ್ವತಿ, ಗೋಕುರಮ್ಮ, ಗಂಗಮ್ಮ, ಆದಿಲಕ್ಷ್ಮೀ, ಮಮತಾ, ರಾಧಮ್ಮಇತರರಿದ್ದರು. ಹೋರಾಟ ಬೆಂಬಲಿಸಿ ಕೆಪಿಆರ್‌ಎಸ್‌ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ್‌ ಭಾಗವಹಿಸಿದ್ದರು

ಕೃಷಿ ನೀತಿ ಕರಡು ಪ್ರತಿ ಸುಟ್ಟು ಪ್ರತಿಭಟನೆ :

Advertisement

ಲಿಂಗಸುಗೂರು: ಕೇಂದ್ರ- ರಾಜ್ಯ ಸರ್ಕಾರಗಳ ಕೃಷಿ ನೀತಿ ವಿರೋಧಿಸಿ ಸಿಐಟಿಯು ಮುಖಂಡರು ಶುಕ್ರವಾರಪಟ್ಟಣದ ಬಸ್‌ ನಿಲ್ದಾಣ ವೃತ್ತದಲ್ಲಿಕರಡು ಪ್ರತಿ ಸುಟ್ಟು ಪ್ರತಿಭಟನೆ ನಡೆಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿ, ರೈತರ ಜಮೀನುಗಳ ಪರಭಾರೆ ಸೇರಿದಂತೆ ಕೃಷಿ ವಿರೋಧಿ ಕಾನೂನು ಜಾರಿ ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ಒಕ್ಕಲುತನ ನಾಶ ಮಾಡಲುಹೊರಟಿದೆ. ಇದನ್ನು ಮನಗಂಡುಪಂಜಾಬ, ಹರಿಯಾಣ, ಉತ್ತರಪ್ರದೇಶರೈತರು ರಾಜಧಾನಿ ದೆಹಲಿಯಲ್ಲಿ ಉಗ್ರಹೋರಾಟ ನಡೆಸುತ್ತಿದ್ದಾರೆ. ಆದರೂಕೇಂದ್ರ ಸರ್ಕಾರ ಬಂಡವಾಳಶಾಹಿಗಳಪರವಾದ ಕಾನೂನು ಜಾರಿಗೊಳಿಸಲುಹೋರಾಟ ಹತ್ತಿಕ್ಕಲು ಮುಂದಾಗಿದೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ನಡೆಸುತ್ತಿರುವಹೋರಾಟ ದೇಶಾದ್ಯಂತವಿಸ್ತರಣೆಯಾಗುವ ಮೊದಲು ಕೇಂದ್ರಸರ್ಕಾರ ಎಚ್ಚೆತ್ತು ಉದ್ದೇಶಿತ ಕೃಷಿಕಾಯ್ದೆಗಳ ಜಾರಿ ಕೈಬಿಟ್ಟು ರೈತರಹಿತಕಾಯಬೇಕೆಂದು ಆಗ್ರಹಿಸಿದರು.ಈ ವೇಳೆ ಸಿಐಟಿಯುನ ಮಹ್ಮದಹನೀಫ್‌, ಗ್ರಾಪಂ ಸದಸ್ಯ ರಮೇಶವೀರಾಪುರ, ಬಾಬಾಜಾನಿ, ಮಾನಪ್ಪಲೆಕ್ಕಿಹಾಳ, ಸದ್ದಾಂ ಹುಸೇನ ಮುದಗಲ್‌, ಸಾವಿತ್ರಿ ಚೆನ್ನೂರಕರ್‌, ಹುಸೇನ ಬಾನು, ಸುನೀತಾ, ಗುರಪ್ಪ ನಾಯಿಕೊಡಿ, ಬೀಬಿ, ಅರುಂದಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next