ಶ್ರೀರಂಗಪಟ್ಟಣ: ಕಲ್ಲುಗಣಿಗಾರಿಕೆಯ ಟಿಪ್ಪರ್ ಲಾರಿಗಳ ಸಂಚಾರದಿಂದ ಮೈ- ಬೆಂ ಹೆದ್ದಾರಿ ರಸ್ತೆ ಹಾಳಾಗುತ್ತಿರುವುದು ಮತ್ತು ಜನರಿಗೆ ತೊಂದರೆಯಾಗುತ್ತಿರುವುದನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮೈ- ಬೆಂ ಹೆದ್ದಾರಿಯ ಚೆಕ್ ಪೋಸ್ಟ್ ಬಳಿ ಇರುವ ಗಣಿ ಇಲಾಖೆಯ ತಪಾಸಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು,ತಪಾಸಣೆ ಮಾಡುವ ಜಾಗದಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಟಿಪ್ಪರ್ ಲಾರಿ ಮಾಲೀಕರಿಂದಾಗಿ ಇಲ್ಲವೇ ಗಣಿ ಇಲಾಖೆಯಿಂದಲೇ ದುರಸ್ತಿ ಮಾಡಿಸುವಂತೆ ಆಗ್ರಹಿಸಿದರು.
ಈ ಕ್ವಾರೆಗಳಿಂದ ಕಲ್ಲು ಹೆಚ್ಚಿನ ಮರಳು ,ಜಲ್ಲಿ ಸಾಗಿಸುವ ಟಿಪ್ಪರ್ ಲಾರಿಗಳಿಂದ ಹೆದ್ದಾರಿಯಲ್ಲಿ ಗುಂಡಿ ಉಂಟಾಗುತ್ತಿದೆ.ಅಲ್ದೆ ಇವರು ಕಲ್ಲು ಮರಳು ಡಸ್ಟ್ ಸಾಗಿಸುವ ಸಂಧರ್ಭದಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿದೆ ವಾಹನದಲ್ಲಿ ಸಾಗಿಸುತ್ತಿದ್ದು ಇದ್ರಿಂದ ಹೆದ್ದಾರಿಯಲ್ಲಿ ಸಾಗುವ ಬೈಕ್ ಸವಾರರಿಗೆ ತೊಂದರೆ ಆಗುತ್ತಿದೆ. ಇದ್ರಿಂದ ಅಪಘಾತ ಕೂಡ ಸಂಭವಿಸ್ತಿದ್ದು, ಈ ಕೂಡಲೇ ಇಂತಹ ಟಿಪ್ಪರ್ ಲಾರಿಗಳ ವಿರುದ್ದ ಕ್ರಮ ವಹಿಸುವಂತೆ ಆಗ್ರಹಿಸಿ ಚೆಕ್ ಪೋಸ್ಟ್ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಇದರ ವಿರುದ್ದ ಈ ಕೂಡಲೇ ಕ್ರಮ ಕೈ ಗೊಳ್ಳದಿದ್ದರೆ ಮುಂದಿನ ದಿನಗಳ ಇದರ ವಿರುದ್ದ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಚೆಕ್ ಪೋಸ್ಟ್ ನಲ್ಲಿದ್ದ ಗಣಿ ಇಲಾಖೆ ಅಧಿಕಾರಿ ಈ ಕುರಿತಾಗಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ತಮ್ಮ ಮನವಿಯನ್ನು ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಈ ವೇಳೆ ಮಂಡ್ಯ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಶಂಕರ್ ಬಾಬು ಸೇರಿದಂತೆ ಪದಾಧಿಕಾರಿಗಳಾದ ಜಗದೀಶ್,ಕೂಡಲ ಕಪ್ಪೆ ಶಂಕರ್,ಕಯಮಾರ್,ಶ್ರೀನಿವಾಸ್ ,ಬಳ್ಳೇಕೆರೆ ಶ್ರೀಕಾಂತ್,ಬಾಳೆ ಮಂಜು,ಗೌಡಹಳ್ಳಿಮಧು,ಚಿದಂಬರ,ಇತರರು ಇದ್ದರು.