Advertisement

ಪಾಲಿಕೆ ಆಯುಕ್ತರ ಪರ ಪ್ರತಿಭಟನೆ

02:25 PM Aug 05, 2017 | |

ವಿಜಯಪುರ: ಮಹಾನಗರ ಪಾಲಿಕೆ ದಕ್ಷ ಆಯುಕ್ತ ಹರ್ಷ ಶೆಟ್ಟಿ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ವಿಜಯಪುರ ಗುತ್ತಿಗೆದಾರರ ಸಂಘ ಹಾಗೂ ಕಾರ್ಮಿಕರು ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ನಗರದ ಸಿದ್ದೇಶ್ವರ ದೇವಾಲಯದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾ ಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಆರ್‌. ರೆಡ್ಡಿ ಮಾತನಾಡಿ, ದಕ್ಷ, ಪ್ರಾಮಾಣಿಕ ಅಧಿಕಾರಿ ಹರ್ಷ ಶೆಟ್ಟಿ ಅವರು ನಗರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಗರದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇಂತಹ ಅಧಿ ಕಾರಿಯನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು.

ಮಾಸ್ಟರ್‌ ಪ್ಲಾನ್‌ ಅನುಷ್ಠಾನ, ಸುಸಜ್ಜಿತ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳು ಹರ್ಷ ಶೆಟ್ಟಿ ಅವರ ಅವಧಿಯಲ್ಲಿ ನಡೆದಿವೆ. ನಗರದಾದ್ಯಂತ ಎಲ್ಲ ವಾರ್ಡುಗಳಲ್ಲಿ  ಉತ್ತಮ ದರ್ಜೆ ರಸ್ತೆಗಳ ಅಭಿವೃದ್ಧಿ ಕೆಲಸಗಳನ್ನು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಅದರಂತೆ ಫೆಬ್ರುವರಿ
ಮಾರ್ಚ್‌ ತಿಂಗಳಲ್ಲಿನ ಭೀಕರ ಬರ ಸಂಕಷ್ಟದ ಸಂದರ್ಭದಲ್ಲಿ ನಗರದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದರು.

ವಿಜಯಪುರ ನಗರದಲ್ಲಿ ಇತ್ತೀಚೆಗೆ ಸರ್ಕಾರಿ ಜಾಗೆ ಅತಿಕ್ರಮಣ, ಅನಧಿಕೃತ ಕಟ್ಟಡ ತೆರವುಗೊಳಿಸಲು ಮುಂದಾದಾಗ ಅಲ್ಲಿನ ಕೆಲ ಅನಧಿಕೃತ ಸಂಘಟನೆಗಳ ವ್ಯಕ್ತಿಗಳು ತಮ್ಮ ಲಾಭಕ್ಕಾಗಿ ಆಯುಕ್ತರನ್ನು ನೇರವಾಗಿ ಗುರಿಪಡಿಸಿ ಆಯುಕ್ತರನ್ನು ಅಮಾನತುಗೊಳಿಸಿ ಎನ್ನುವ ಘೋಷಣೆ ಕೂಗಿ ಅವರ ಪ್ರತಿಕೃತಿ ದಹಿಸಿರುವ ಕ್ರಮ ದುರದೃಷ್ಟಕರ ಎಂದರು.

ಮುಖಂಡ ಚಂದ್ರು ದೊಡ್ಡಮನಿ, ಎಂ.ಎಂ. ಮನಿಯಾರ, ರಾಜುಗೌಡ, ಬಿ.ಬಿ. ಪಾಟೀಲ, ಎಪ್‌.ಪಿ. ವಲ್ಲಾಪುರ, ಎಸ್‌.ಎಂ. ಸಿಂದಗಿ, ಎಂ.ಎಂ. ಬಾಗವಾನ, ವಿಲಾಸ ಇರಕರ, ಗುಲ್ಜಾರ ಬೀಳಗಿ, ಎಸ್‌.ಎಸ್‌. ಕಬಾಡೆ, ಎಂ.ಡಿ.ಇನಾಮದಾರ, ಮಾಶ್ಯಾಳಕರ, ರವೀಂದ್ರ ಶಿಂಧೆ, ಎಸ್‌.ವಿ.ಜತ್ತಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next