Advertisement

ಅಗತ್ಯ ವಸ್ತುಗಳ ದರ ಏರಿಕೆ ಖಂಡಿಸಿ ಪ್ರತಿಭಟನೆ

05:42 PM Mar 05, 2021 | Team Udayavani |

ಕಲಬುರಗಿ: ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

Advertisement

ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕನಿಷ್ಠ ಮಟ್ಟದಲ್ಲಿ
ಇದ್ದರೂ ತೆರಿಗೆ ಏರಿಸಿ ಪೆಟ್ರೋಲ್‌-ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ನೂರು ರೂಪಾಯಿಗೆ ಹೆಚ್ಚಿಸಿದೆ. ಅಡುಗೆ ಅನಿಲದ ದರವನ್ನು ಮೂರೇ ತಿಂಗಳಲ್ಲಿ 200 ರೂ.ಗೆ ಹೆಚ್ಚಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿವಿಧ ಸಬ್ಸಿಡಿಗಳನ್ನು ನೇರವಾಗಿ ಜನರ ಖಾತೆಗೆ ಜಮಾ ಮಾಡುತ್ತೇವೆ ಎಂದು ಹೇಳಿ ಲಕ್ಷಾಂತರ ಬ್ಯಾಂಕ್‌ ಖಾತೆ ತೆರೆಸಲಾಯಿತು.

ಆದರೆ, ಗ್ಯಾಸ್‌ ಸಬ್ಸಿಡಿ, ಕೃಷಿ ಸಬ್ಸಿಡಿ, ಅಂಗವಿಕಲ, ವಿಧವೆಯರ, ವಯೋವೃದ್ಧರ ಪಿಂಚಣಿ ಹಣ ಸೇರಿದಂತೆ ಸರ್ಕಾರದಿಂದ ಬರಬೇಕಾಗಿದ್ದ ಅದೆಷ್ಟೋ ದುಡ್ಡು ಜನರಿಗೆ ತಲುಪುತ್ತಿಲ್ಲ. ಮೇಲಾಗಿ ಖಾತೆಗಳಲ್ಲಿ ನಿರ್ದಿಷ್ಟವಾದ ಮೊತ್ತ ಉಳಿಸಿಕೊಂಡಿಲ್ಲ ಎಂದು ಹೇಳಿ ಜನರಿಗೆ ದಂಡ ವಿಧಿ ಸಲಾಗುತ್ತಿದೆ. ಈ ಮೂಲಕ ಜನರ ಹಣವನ್ನೇ ಸರ್ಕಾರ ದೋಚುವ ಕೆಲಸದಲ್ಲಿ ತೊಡಗಿದೆ ಎಂದು ಕಿಡಿಕಾರಿದರು. ಬಡವರ ಪಡಿತರ ವ್ಯವಸ್ಥೆ ಹಳಿತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಉಚಿತವಾಗಿ ವಿತರಿಸಲಾಗುತ್ತಿದ್ದ 7 ಕೆಜಿ ಅಕ್ಕಿಯನ್ನು ಈಗ 5 ಕೆಜಿಗೆ ಇಳಿಸಲಾಗಿದೆ.

ಹಿಮಾಚಲ ಪ್ರದೇಶದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಶಾಂತಕುಮಾರ ನೇತೃತ್ವದ ಸಮಿತಿಯೊಂದು ಪಡಿತರ ವಿತರಣೆಯನ್ನು ಹಂತ-ಹಂತವಾಗಿ ತಗ್ಗಿಸಿ ಅಂತಿಮವಾಗಿ ಅದನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದು ಆಡಳಿತಾರೂಢ ಬಿಜೆಪಿಯ ಜನ ವಿರೋಧಿ ನೀತಿ ತೋರಿಸುತ್ತದೆ. ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಪಾಲು ಮಾಡುವ ಹುನ್ನಾರ ನಡೆದಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯಕ್ಕೆ ಶೇ.1ಕ್ಕಿಂತ ಕಡಿಮೆ ಹಣ
ಮೀಸಲಿಡಲಾಗಿದೆ. ಶಿಕ್ಷಣವನ್ನು ಖಾಸಗೀಕರಣ ವಸ್ತುವಾಗಿ ಮಾಡಿ ಸರ್ಕಾರಿ ಸೌಲಭ್ಯಗಳನ್ನು ಗಗನ ಕುಸುಮವಾಗಿಸಲು ಹುನ್ನಾರ ನಡೆದಿದೆ ಎಂದು ಪ್ರತಿಭಟನಾನಿರತರು ದೂರಿದರು.

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷಾಂತರ ಜನ ದಿನಗೂಲಿ ನೌಕರರು, ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರ-ವಹಿವಾಟು ನಿಲ್ಲಿಸಿದ್ದಾರೆ. ವಲಸೆ ಕಾರ್ಮಿಕರು, ಜನರು ಸೇರಿ ದೇಶದ ಜನತೆ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಕೊರೊನಾ ಮುಂಚೂಣಿ ಹೋರಾಟಗಾರರೆಂದು ಕೆರೆಯಲಾದ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸರ್ಕಾರ ಕುರುಡಾಗಿದೆ. ಪೌರಕಾರ್ಮಿಕರು, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ವಲಸೆ ಕಾರ್ಮಿಕರ ಗೋಳು ಅರಣ್ಯರೋದನವಾಗಿದೆ.

Advertisement

ರೈತರು ಬೆಳೆದ ಬೆಳೆಗಳಿಗೆ ಸರಿಯಾದ cಎಂದು ಜಿಲ್ಲಾಧಿಕಾರಿಗಳಮೂಲಕ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಯುಸಿಐಸಿ ರಾಜ್ಯ ಸಮಿತಿ ಸದಸ್ಯ ಎಚ್‌.ವಿ. ದಿವಾಕರ್‌, ಜಿಲ್ಲಾ ಸಮಿತಿ ಸದಸ್ಯರಾದ ವಿ.ನಾಗಮ್ಮಾಳ್‌, ವಿ.ಜಿ.ದೇಸಾಯಿ, ರಾಮಣ್ಣ ಇಬ್ರಾಹಿಂಪುರ, ಗಣಪತರಾವ್‌ ಮಾನೆ, ಎಸ್‌.ಎಂ.ಶರ್ಮಾ, ಮಹೇಶ ಎಸ್‌.ಬಿ., ಮಹೇಶ ನಾಡಗೌಡ, ಡಾ| ಸೀಮಾ ದೇಶಪಾಂಡೆ ಹಾಗೂ ಜಗನ್ನಾಥ ಎಸ್‌.ಎಚ್‌., ರಾಘವೇಂದ್ರ ಎಂ.ಜಿ, ಗುಂಡಮ್ಮ ಮಡಿವಾಳ, ಹಣಮಂತ ಎಸ್‌.ಎಚ್‌.,ಅಶ್ವಿ‌ನಿ, ಅಭಯಾ ದಿವಾಕರ್‌, ಸ್ನೇಹಾ ಕಟ್ಟಿಮನಿ, ಗೌರಮ್ಮ,ಭೀಮಾಶಂಕರ ಪಾಣೇಗಾಂವ್‌, ರಾಧಾ, ಈರಣ್ಣ ಇಸಬಾ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next